ಕೋಲಾರ: ದಿನ ಪತ್ರಿಕೆಗಳ ಓದಿನಿಂದ ನಮ್ಮ ಜ್ಞಾನ ವೃದ್ಧಿ ಜತೆಗೆ ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಮಾಹಿತಿ ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದಿನ ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಮಹಮದ್ ಹನ್ೀ ಹೇಳಿದರು.
ನಗರದ ಬಸವಶ್ರೀ ಪಿಯು ಕಾಲೇಜಿನಲ್ಲಿ ಸೋಮವಾರ "ವಿಜಯವಾಣಿ' ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಮಾತನಾಡಿ, ಓದುಗರಿಗೆ ವಿಚಾರಗಳ ಅಭಿರುಚಿ ಕಲಿಸುವಲ್ಲಿ ವಿಜಯವಾಣಿ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.
ಪ್ರತಿ ವರ್ಷ ಮಹಿಳೆಯರು, ವಿದ್ಯಾರ್ಥಿ, ರೈತರಿಗಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಎಲೆ ಮರೆಯ ಕಾಯಿಗಳನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ವಿಜಯವಾಣಿ ಓದಿ ಬಹುಮಾನ ಗೆಲ್ಲಿ ಕಾರ್ಯಕ್ರಮದಿಂದ ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಯ ವ್ಯಕ್ತಿಗಳಿಗೆ ಬಹುಮಾನ ಲಭಿಸಿದೆ. ಮಹಿಳೆಯರಿಗಾಗಿ "ನಾರಿ ನಿನಗೊಂದು ಸ್ಯಾರಿ' ಸತತವಾಗಿ ಏಳು ವರ್ಷಗಳಿಂದ ನಡೆಸಿಕೊಂಡು ಮಂದಿದ್ದು, ಇದು ಮಹಿಳೆಯರ ಮನೆ ಮಾತಾಗಿದೆ. ಪತ್ರಿಕೆ ಓದುವ ಮಹಿಳೆಯರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಇದಾಗಿದೆ. ಇನ್ನು ಹೆಚ್ಚಿಗೆ ಮಹಿಳೆಯರು ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಗೆಲ್ಲಬೇಕು, ಈ ಬಾರಿ ಸಿಗದಿದ್ದರೂ ಮುಂದಿನ ದಿನಗಳಲ್ಲಿ ಸಿಗುತ್ತದೆ. ಹಾಗಾಗಿ ಮರಳಿ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸ್ಪರ್ಧೆಯಲ್ಲಿ ಸಾಹಿತ್ಯ, ಸಾಮಾನ್ಯ ಜ್ಞಾನ, ಕ್ರೀಡೆ, ರಕ್ಷಣಾ ಇಲಾಖೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದು, ಪ್ರಶ್ನೆಗಳಿಗೆ ಉತ್ತರ ಹುಡುಕಿಸುವ ಪ್ರಯತ್ನ ನಡೆದಿದೆ. ಇದು ಜನರಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಉಪನ್ಯಾಸಕರಾದ ಸುಷ್ಮಿತಾ, ಶಿಲ್ಪಾ, ಅಯಿಷಾ, ಮಾನಸ, ಹರ್ಷಿತಾ, ಅನಿತಾ, ಲತಾಶ್ರೀ, ಪದ್ಮಾವತಿ, ಸಾದಿಯಾ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದರು. ಉಪನ್ಯಾಸಕರಾದ ರಮೇಶ್ ಬಾಬು, ಶ್ರೀನಾಥ್, ಸತೀಶ್, ಜಿ.ವೆಂಕಟೇಶ್, ಜೀಚಾನಲಿ, ನಾಗರಾಜ್, ನಂದನ್, ನಾಗರಾಜ್ ಉಪಸ್ಥಿತರಿದ್ದರು.
* ಆಯ್ಕೆಯಾದ ಅದೃಷ್ಟಶಾಲಿಗಳು
ಕೋಲಾರ ತಾಲೂಕಿನ ಬೆಗ್ಲಿಹೊಸಹಳ್ಳಿಯ ಕೆ.ಎನ್.ಮಂಜುಳಾ, ಕನಕನಪಾಳ್ಯ ಗೃಹಿಣಿ ಎಸ್.ಮಂಜುಳಾ, ವಾನರಾಶಿ ಗೃಹಿಣಿ ಅರುಣಾ, ಭಟ್ರಹಳ್ಳಿ ಗೃಹಿಣಿ ಅನುಷಾ, ವೇಮಗಲ್ ಗೃಹಿಣಿ ಸುಜಾತಾ ಅವರು ಲಕ್ಕಿ ಡ್ರಾದಲ್ಲಿ ವಿಜೇತರಾದರು.