ನ್ಯೂಸ್

ಸಂವಿಧಾನ ಪೀಠಿಕೆ ಓದು ಹೊಸ ಇತಿಹಾಸ; ಸಚಿವ ಎಚ್‌.ಸಿ‌. ಮಹದೇವಪ್ಪ

ಬೆಂಗಳೂರು: ಭಾರತದ ಸಂವಿಧಾನ ಪೀಠಿಕೆಯ ವಾಚನದ ಮೂಲಕ ಕರ್ನಾಟಕ ಹೊಸ ಇತಿಹಾಸ ಬರೆದಿದೆ ಎಂದು
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ವಿಧಾನಸೌಧ ಭವ್ಯ ಮೆಟ್ಟಿಲುಗಳ ಮೇಲೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಭಾರತ ಸಂವಿಧಾನ ಪೀಠೀಕೆಯ ಜಾಗತಿಕ ವಾಚನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಪ್ರಜಾಸತ್ತಾತ್ಮಕ ಮೌಲ್ಯಗಳ ಉನ್ನತೀಕರಣಕ್ಕೆ ಪೂರಕ ತಳಹದಿಯನ್ನು ಅವು ರೂಪಿಸುತ್ತಿದ್ದೇವೆ.
ಸಂವಿಧಾನದ ಆಶಯ ಅನುಷ್ಠಾನಗೊಳಿಸುವ ಉದಾತ್ತ ಉದ್ದೇಶವನ್ನು ನಮ್ಮ ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಎಲ್ಲರಿಗೂ ಸಮಾನ ನ್ಯಾಯ ಹಕ್ಕು, ಸ್ತ್ರೀ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ ಉಲ್ಲಂಘನೆಯಾಗದ ರೀತಿ ನಡೆಯುವುದು ಮುಖ್ಯ. ಅದರ ಜತೆಗೆ ಮೂಲಭೂತ ಹಕ್ಕುಗಳು, ಜವಾಬ್ದಾರಿ ಮತ್ತು ಕರ್ತವ್ಯ ಎಚ್ಚರಿಸಿ ಸಂವಿಧಾನದ ಮೌಲ್ಯ ಜಾರಿ ಮಾಡುವ ನಿರ್ಣಯ ನಮ್ಮ ಸರ್ಕಾರ ಮಾಡುತ್ತಿದೆ ಎಂದರು. ಸ್ವಾತಂತ್ರ್ಯದ ಉದ್ದೇಶ ಸಂವಿಧಾನದ ಆಶಯ ಸಾಕಾರ ನಮ್ಮ ಗುರಿ ಎಂದು ಮಹದೇವಪ್ಪ ಹೇಳಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.