ಸಿರಗುಪ್ಪ: ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಪ್ರಶಾಂತ್ ಕುಮಾರ್ ಅವರನ್ನು ಜಿಲ್ಲಾ ಬಿಮ್ಸ್‌ಗೆ ವರ್ಗಾವಣೆಗೊಳಿಸಿದ್ದು ಮರಳಿ ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಗೆ ನೇಮಿಸುವಂತೆ ಕರ್ನಾಟಕ ದಲಿತ ಸಂಘಷರ್ ಸಮಿತಿ ತಾಲೂಕು ಘಟಕದ ಸದಸ್ಯರು ತಹಸೀಲ್ದಾರ್ ಗೌಸೀಯಾ ಬೇಗಂ ಅವರಿಗೆ ಮನವಿ ಸಲ್ಲಿಸಿದರು.
ಸರ್ವಧರ್ಮೀಯ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ತಾಲೂಕು ಉಪಾಧ್ಯಕ್ಷ ಆರ್.ಯೋಗಾನಂದ ಮಾತನಾಡಿ, ತಾಲೂಕಿನಲ್ಲಿ ಅತಿ ದೊಡ್ಡ ಸಾರ್ವಜನಿಕ ಆಸ್ಪತ್ರೆಯಾಗಿದ್ದು, ವಿವಿಧ ಗ್ರಾಮೀಣ ಭಾಗದಿಂದ ಹೆರಿಗೆಗೆ ಬರುವ ಗರ್ಭಿಣಿಯರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದರು. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಚಿಗದೆ ಗರ್ಭಿಣಿಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ದರಗಪ್ಪ ಕುಡುದರಹಾಳ್, ಸದಸ್ಯರಾದ ಎ.ಎಂ.ಶೇಖರ್, ಎಸ್.ನಂದೀಶ್, ಕುಮಾರ್, ಗೌರೀಶ, ಹೇಮಂತ, ವಿರುಪಣ್ಣ, ಆನಂದ, ಸತ್ಯಪ್ಪ, ಸಾಂಬಶಿವ ಕೊಡ್ಲೆ, ಹುಚ್ಚಪ್ಪ, ಮಣಿ ಕುಮಾರ್, ಗಾದಿಲಿಂಗ ಇತರರಿದ್ದರು.