ಗದಗ: ಜ್ಞಾನ ಮತ್ತು ಕುಶಲತೆ ಯನ್ನು ವಿದ್ಯಾಥಿರ್ಗಳಲ್ಲಿ ಬಿತ್ತಬೇಕಿದೆ. ಕೃಷಿಯಲ್ಲಿ ಕೌಶಲ್ಯತೆಗೆ ಆಧ್ಯತೆ ನೀಡಬೇಕು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಚೇರಮನ್ ಹಾಗೂ ಕೇಂದ್ರಿಯ ವಿವಿ ಕುಲಾಧಿಪತಿ ಡಾ. ಸುಬ್ಬಣ್ಣ ಅಯ್ಯಪ್ಪನ್ ಹೇಳಿದರು
ಆರ್ಡಿಪಿಆರ್ ವಿವಿಯಲ್ಲಿ ಶುಕ್ರವಾರ ಜರುಗಿದ 3ನೇ ಘಟಿಕೋತ್ಸವ ಭಾಷಣದಲ್ಲಿ ವಿದ್ಯಾಥಿರ್ಗಳಿಗೆ ವರ್ತಮಾನದ ಸವಾಲುಗಳು ಮತ್ತು ಕೃಷಿ ಉದ್ಯಮದ ಬಗ್ಗೆ ಮಾತನಾಡಿದ ಅವರು ಇಂಜಿನಿಯರಿಂಗ್, ಮೆಡಿಸನ್ ಕೋರ್ಸ್ಗಳತ್ತ ಮುಖ ಮಾಡುವ ಈ ಕಾಲದಲ್ಲಿ ಕೃಷಿ, ಗ್ರಾಮೀಣ ವಿಷಯಗಳನ್ನು ಆಯ್ಕೆ ಮಾಡಿಕೊಂಡ ನಿಮಗೆ ಮತ್ತು ನಿಮ್ಮನ್ನು ಪೋಷಿಸಿದ ಪಾಲಕರಿಗೆ ಧನ್ಯವಾದ. ಕೃಷಿಯನ್ನು ಉಳಿಮೆ, ಕಟಾವು ಎಂದಷ್ಟೇ ಸಿಮೀತಗೊಳಿಸದೇ ಸಂರಕ್ಷಣೆ, ಸಂಸ್ಕರಣೆ ಮತ್ತು ಮಾರಾಟವೇ ಕೃಷಿ ಎಂಬುದನ್ನು ತಿಳಿಯಬೇಕು. ಕೃಷಿ ಸ್ಟಾರ್ಟ್ಅಪ್ಗಳಿಗೆ ಬೇಡಿಕೆ ಹೆಚ್ಚಿದೆ. ಉದ್ಯೋಗ ಅರಸಿ ಹೋಗುವ ಬದಲಾಗಿ, 10 ಜನರಿಗೆ ಉದ್ಯೋಗ ನೀಡುವ ಸಂಕಲ್ಪ ತೊಡಬೇಕು. ನಿರಂತರ ಕಲಿಕೆ, ಉಳಿಕೆ, ಗಳಿಕೆ ಹೊಂದಿರಬೇಕು ಮತ್ತು ಈ ಮೂರು ವಿಷಯಗಳು ಕೇವಲ ಹಣಕ್ಕೆ ಸಬಂಧಿಸಿದ್ದಾಗಿರಬಾರದು ಎಂದರು .
ರಾಷ್ಟ್ರೀಯ ಶಿಕ್ಷಣ ನೀತಿ, ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತದಲ್ಲೇ ಈ ವಿವಿ ಜ್ಞಾನದ ಬಂಢಾರ ಆಗುವತ್ತ ಮುನ್ನುಗುತ್ತಿದೆ. ಕೃಷಿ ಇದ್ದರೇ ಈ ಭೂಮಿ ಸಮತೋಲನದಲ್ಲಿ ಇರುತ್ತದೆ. ಸ್ವಾಮಿ ವಿವೇಕಾನಂದ ಕೇಂದ್ರ, ಸಮಬರಮತಿ ಆಶ್ರಮ, ಕೃಷಿಗೆ ಮಹತ್ವ ನೀಡುತ್ತಿರುವ ಈ ವಿವಿಯು ಒಂದು ವಿವಿ ಹೇಗಿರಬೇಕು ಎಂಬುದನ್ನು ತಿಳಿಸುತ್ತಿದೆ ಎಂದು ತಿಳಿಸಿದರು.
ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಭಿ:ದೇಶದಲ್ಲಿ 31 ಕೋಟಿ ಟನ್ ಆಹಾರ, 33 ಕೋಟಿ ಟನ್ ಹಣ್ಣು, ತರಕಾರಿ, 26 ಟನ್ ಹಾಲು ಉತ್ಪಾದನೆ ಜರುಗುತ್ತಿದ್ದು 140 ಕೊಟಿ ಜನರಿಗೆ ಆಹಾರ ಭದ್ರತೆ ಒದಗಿಸಲಾಗಿದೆ. ಅಫ್ಘಾನಿಸ್ತಾನಕ್ಕೂ ಆಹಾರ ಸರಬರಾಜು ಮಾಡುತ್ತಿದ್ದೇವೆ. ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಭಿಯಾಗಿದೆ ಎಂದು ಡಾ. ಸುಬ್ಬಣ್ಣ ಅಯ್ಯಪ್ಪನ್ ಹೇಳಿದರು.