ನ್ಯೂಸ್

ಆರ್​ಸಿಬಿ 4 ಪಂದ್ಯಾವಳಿಗಳನ್ನು ಸತತವಾಗಿ ಗೆಲ್ಲುವ ಅವಕಾಶವಿದೆ ಎಂದ ಡಿವಿಲಿಯರ್ಸ್…!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅನೇಕ ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿಗಳನ್ನು ಗೆಲ್ಲುವ ಅವಕಾಶವಿದೆ ಎಂದು ಆರ್​ಸಿಬಿ ತಂಡದ ಮಾಜಿ ಆಟಗಾರ ಎ.ಬಿ. ಡಿವಿಲಿಯರ್ಸ್ ಹೇಳಿದ್ದಾರೆ.

ಟಿ20 ಕ್ರಿಕೆಟ್ ಒಂದು ತರಹ ಜೂಜಾಟದ ಹಾಗೆ. ಆರ್‌ಸಿಬಿ ತಂಡಕ್ಕೆ ಮುಂಬರುವ ಪಂದ್ಯಾವಳಿಗಳಲ್ಲಿ ಅದೃಷ್ಟ ಕೈ ಹಿಡಿಯುತ್ತದೆ ಎಂಬ ನಂಬಿಕೆ ಇದೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಡಿವಿಲಿಯರ್ಸ್ ಹೇಳಿದ್ದಾರೆ.

"14-15 ಸೀಸನ್‌ಗಳಾಗಿವೆ. ನನ್ನ ಪ್ರಕಾರ, ಆರ್​ಸಿಬಿ ಒಂದು ಪಂದ್ಯಾವಳಿ ಗೆದ್ದರೆ ಬಹುಶಃ ಅದರ ಮುಂದಿನ ಎರಡು, ಮೂರು, ನಾಲ್ಕು ಪಂದ್ಯಾವಳಿಗಳನ್ನು ಗೆಲ್ಲುತ್ತದೆ. ಆದರೆ ಏನಾಗುತ್ತದೆ ಎಂದು ಕಾದು ನೋಡೋಣ. ವಿಶೇಷವಾಗಿ ನಾಕೌಟ್ ಪಂದ್ಯಗಳು ಜೂಜಾಟದಂತೆ. ಏನು ಬೇಕಾದರೂ ಆಗಬಹುದು" ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ವರದಿಗಳ ಪ್ರಕಾರ, ಡಿವಿಲಿಯರ್ಸ್ ಆರ್​ಸಿಬಿಗೆ ಮಾರ್ಗದರ್ಶಕರಾಗಿ ಮತ್ತು ಡಿಸೆಂಬರ್​ನಲ್ಲಿ ನಡೆಯುವ ಮಿನಿ ಆಕ್ಷನ್​​ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಏಜೆನ್ಸೀಸ್