ಹೊಸದಿಲ್ಲಿ: ಡಿಸೆಂಬರ್ 11, 2023 ರಂದು ಭಾರತೀಯ ರಿಸರ್ವ್ ಬ್ಯಾಂಕ್ (RBI), ಸಾಲ ಮನ್ನಾ ಮಾಡುವ ಭರವಸೆ ನೀಡುವ, ತಪ್ಪುದಾರಿಗೆಳೆಯುವ ಜಾಹೀರಾತುಗಳು ಇತ್ತೀಚೆಗೆ ವ್ಯಾಪಕವಾಗಿ ಹೆಚ್ಚುತ್ತಿವೆ ಮತ್ತು ಅಂತಹ ಪ್ರಚಾರಗಳಿಗೆ ಸಿಲುಕದಂತೆ ಸಾರ್ವಜನಿಕರನ್ನು ಎಚ್ಚರಿಸಿದೆ.
ಅನಧಿಕೃತ ಸಂಸ್ಥೆಗಳಿಂದ ಈ ಜಾಹೀರಾತುಗಳು, ಮುದ್ರಣ ಮಾಧ್ಯಮದಲ್ಲಿ ಮತ್ತು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಪ್ರಸಾರವಾಗುತ್ತಿವೆ, ಸಾಲ ಮನ್ನಾ ಪ್ರಸ್ತಾಪದೊಂದಿಗೆ ಸಾಲಗಾರರನ್ನು ಪ್ರಲೋಭನೆಗೊಳಿಸುವ ಪ್ರಯತ್ನದಲ್ಲಿದೆ ಎಚ್ಚರಿಕೆ ವಹಿಸಿ ಎಂದು ಆರ್‌ಬಿಐ ಸಾಲ ಪಡೆದವರಿಗೆ ಈ ಮುಖ್ಯ ಸಂದೇಶವನ್ನು ರವಾನಿಸಿದೆ.
ಈ ಘಟಕಗಳು ಅಂತಹ ಅಭಿಯಾನಗಳನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿವೆ ಮತ್ತು ಯಾವುದೇ ಅಧಿಕೃತ ಅಧಿಕಾರವಿಲ್ಲದೆ 'ಸಾಲ ಮನ್ನಾ ಪ್ರಮಾಣಪತ್ರಗಳನ್ನು' ನೀಡಲು ಸೇವೆ/ಕಾನೂನು ಶುಲ್ಕವನ್ನು ವಿಧಿಸುತ್ತಿವೆ. ಅಂತಹ ಘಟಕಗಳ ವರದಿಗಳು ಮುನ್ನೆಲಗೆ ಬಂದಿವೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಲವು ಸ್ಥಳಗಳಲ್ಲಿ, ನಿರ್ದಿಷ್ಟ ವ್ಯಕ್ತಿಗಳು ಸಾಲದೊಂದಿಗೆ ವಾಗ್ದಾನ ಮಾಡಿದ ಭದ್ರತೆಗಳನ್ನು ಜಾರಿಗೊಳಿಸಲು ಬ್ಯಾಂಕ್‌ಗಳ ಹಕ್ಕುಗಳನ್ನು ದುರ್ಬಲಗೊಳಿಸುವ ಅಭಿಯಾನಗಳನ್ನು ನಡೆಸುತ್ತಿರುವುದು ಕಂಡುಬಂದಿದೆ ಎಂದ ಆರ್‌ಬಿಐ, ಅಂತಹ ಘಟಕಗಳು ಬ್ಯಾಂಕ್‌ಗಳು ಸೇರಿದಂತೆ ಹಣಕಾಸು ಸಂಸ್ಥೆಗಳಿಗೆ ಪಾವತಿಸಬೇಕಾದ ಬಾಕಿಯನ್ನು ಮರುಪಾವತಿಸಬೇಕಾಗಿಲ್ಲ ಎಂದು ತಪ್ಪಾಗಿ ನಿರೂಪಿಸುತ್ತಿವೆ. ಈ ರೀತಿಯ ಚಟುವಟಿಕೆಗಳು ಹಣಕಾಸು ಸಂಸ್ಥೆಗಳ ಸ್ಥಿರತೆಯನ್ನು ಹಾಳುಮಾಡುತ್ತವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಠೇವಣಿದಾರರ ಹಿತಾಸಕ್ತಿಗಳನ್ನು ಹಾಳುಮಾಡುತ್ತವೆ ಎಂದಿದೆ.
ಇಂತಹ ಸಂಸ್ಥೆಗಳೊಂದಿಗೆ ಸಹಭಾಗಿತ್ವವು ನೇರ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದ ಆರ್‌ಬಿಐ, ಸಾರ್ವಜನಿಕರು ಈ ರೀತಿಯ ಸುಳ್ಳು ಮತ್ತು ದಾರಿತಪ್ಪಿಸುವ ಪ್ರಚಾರಗಳಿಗೆ ಮಾರು ಹೋಗದಂತೆ ಎಚ್ಚರಿಕೆ ವಹಿಸಿ ಜತೆಗೆ ಅಂತಹ ಘಟನೆಗಳನ್ನು ಕೂಡಲೇ ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಿ ಎಂದು ತಿಳಿಸಿದೆ,(ಏಜೆನ್ಸೀಸ್).