ನ್ಯೂಸ್

ರಾಯರಡ್ಡಿ ನಿಂದಿಸಿದವರ ವಿರುದ್ಧ ಪ್ರಕರಣ ದಾಖಲು

ರವೀಂದ್ರ ರಡ್ಡಿ

ಕೊಪ್ಪಳ: ಆನೆಗೊಂದಿ ಭಾಗ ಡ್ರಗ್ಸ್ ಹಬ್ ಎಂದು ಹೇಳಿಕೆ ನೀಡಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ವಿರುದ್ಧ ಪ್ರತಿಭಟನೆ ನಡೆಸಿದವರ ವಿರುದ್ಧ ಗಂಗಾವತಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪ್ರತಿಭಟನೆಯಲ್ಲಿ ಶಾಸಕ ರಾಯರಡ್ಡಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಭಾವಚಿತ್ರಕ್ಕೆ ಬೆಂಕಿ ಇಟ್ಟು ಚಪ್ಪಲಿಯಿಂದ ಹೊಡೆದು ನಿಯಮ ಉಲ್ಲಂಘಿಸಿದ್ದಾರೆಂದು ಆರೋಪಿಸಿ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 8ಕ್ಕು ಹೆಚ್ಚು ರೇಸಾರ್ಟ್ ಮಾಲೀಕರು ಸೇರಿ 20ಜನರ ವಿರುದ್ಧ ದೂರು ದಾಖಲಾಗಿದೆ.


ಹಂಪಿ ಪ್ರದೇಶಾಭಿವೃದ್ಧಿ ಭಾಗದಲ್ಲಿನ ಅಕ್ರಮ ರೆಸಾರ್ಟ್ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವಿಷಯವಾಗಿ ಸದನದಲ್ಲಿ‌ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ ಆನೆಗೊಂದಿ ಭಾಗವನ್ನು ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಿಂದ ಹೊರಗಿಡುವಂತೆ ಮನವಿ ಮಾಡಿದ್ದರು. ಈ ವೇಳೆ ಯಲಬುರ್ಗಾ ಶಾಸಕ‌ ಬಸವರಾಜ ರಾಯರಡ್ಡಿ ಆನೆಗೊಂದಿ ಭಾಗ ಡ್ರಗ್ಸ್ ಹಬ್ ಆಗಿದೆ. ಅಲ್ಲಿನ ಅಕ್ರಮ ಚಟುವಟಿಕೆ ಹಾಕಬೇಕೆಂದು ಆಗ್ರಹಿಸಿದ್ದರು.
ಶಾಸಕರ ಹೇಳಿಕೆಯಿಂದ ಈ ಭಾಗದ ಜನರಿಗೆ ಅವಮಾನವಾಗಿದೆ. ರಾಮಾಯಣದ ಆಂಜನೇಯ ಜನಿಸಿದ ಪ್ರದೇಶಕ್ಕೆ ರಾಯರಡ್ಡಿ ಅವಮಾನಿಸಿದ್ದಾರೆ‌ ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಸೇರಿ ಅನೇಕರು ಕಿಡಿಕಾರಿದ್ದಾರೆ. ಕೆಲ ರೇಸಾರ್ಟ್ ಮಾಲೀಕರು ರಾಯರಡ್ಡಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.