ಬೆಂಗಳೂರು:
ರಾಯಚೂರಿನಲ್ಲಿ ದರ್ವೇಶ್ ಗ್ರೂಪ್ ಆ್ ಕಂಪನಿಯಿಂದ ಹೆಚ್ಚು ಬಡ್ಡಿ ಆಸೆ ತೋರಿಸಿ, ಹಣ ಹೂಡಿಕೆ ಮಾಡಿಸಿಕೊಂಡು ಬಹುಕೋಟಿ ಹಗರಣ ಮಾಡಲಾಗಿದೆ ಎಂದು ಮೇಲ್ಮನೆಯಲ್ಲಿ ಬಿಜೆಪಿಯ ಎನ್.ರವಿಕುಮಾರ್ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.
ಕೂಲಿ ಜನ ಸೇರಿ ಬಡ ವರ್ಗದಿಂದಲೇ ಅತೀ ಹೆಚ್ಚು ಹೂಡಿಕೆ ಯಾಗಿದೆ. ಕೆಲ ಶ್ರೀಮಂತರು ಹೂಡಿಕೆ ಮಾಡಿದ್ದಾರೆ. ಇದು ಮತ್ತೋಂದು ಐಎಂಎ ಹಗರಣವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಕೂಡಲೇ ಕ್ರಮ ಕೈಗೊಳ್ಳುವಂತೆ ರಾಯಚೂರು ಎಸ್ಪಿ ಯವರಿಗೆ ಸೂಚನೆ ನೀಡಲಾಗುವುದು ಎಂದರು.
ಈ ಹಗರಣದ ಬಗ್ಗೆ ಹಿಂದೆನೆ ಚರ್ಚೆಯಾಗಿತ್ತು, ಇದು ಹೊಸದ, ಹಳೆಯದ ನೋಡಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ ಎಂದರು.