ನ್ಯೂಸ್

ರವೀನಾ ‘ಜಟಾಧರ’ ವಿಲನ್! ; ಮತ್ತೊಮ್ಮೆ ಸೌತ್ ಸಿನಿಮಾಕ್ಕೆ ಬಂದ ಬಾಲಿವುಡ್ ನಟಿ

ಬೋಲ್ಡ್ ಪಾತ್ರಗಳ ಮೂಲಕ 90ರ ದಶಕದಲ್ಲಿ ಬಾಲಿವುಡ್ ಆಳಿದ ಖ್ಯಾತಿ ನಟಿ ರವೀನಾ ಟಂಡನ್‌ಗೆ ಸಲ್ಲುತ್ತದೆ. ಇಂತಹ ರವೀನಾ, ಇದೀಗ ಕೆಲ ವರ್ಷಗಳಿಂದ ಪೋಷಕ ಪಾತ್ರಗಳಲ್ಲೂ ಹೆಚ್ಚು ಬಿಜಿಯಾಗಿದ್ದಾರೆ. ಯಶ್ ನಟನೆಯ ‘ಕೆಜಿಎ್ ಚಾಪ್ಟರ್ 2’ನಲ್ಲಿ ರಮಿಕಾ ಸೇನ್ ಆಗಿ ಮಿಂಚಿದ ಬಳಿಕವಂತೂ, ಅವರಿಗೆ ಪ್ಯಾನ್ ಇಂಡಿಯಾ ಆರ್‌ಗಳು ಹೆಚ್ಚಾಗಿವೆ. ಮೊದಲಿನಿಂದಲೂ ಸಿನಿಮಾದಿಂದ ಸಿನಿಮಾಕ್ಕೆ ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ರವೀನಾ ಟಂಡನ್ ಸದ್ಯ ‘ಕೆಜಿಎ್ 2’ ಬಳಿಕ ಮತ್ತೊಮ್ಮೆ ದಕ್ಷಿಣದತ್ತ ಮುಖ ಮಾಡಿದ್ದಾರೆ. ತೆಲುಗಿನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ‘ಜಟಾಧರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಸೂಪರ್ ನ್ಯಾಚುರಲ್ ಚಿತ್ರವಾಗಿದ್ದು, ಭಾರತೀಯ ಸಿನಿಮಾರಂಗದಲ್ಲೇ ಮೊದಲ ಬಾರಿಗೆ ವಿಭಿನ್ನ ರೀತಿಯ ವಿಲನ್ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರ ಪಾತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಶಿವಿನ್ ನಾರಂಗ್ ಆ್ಯಕ್ಷನ್-ಕಟ್ ಹೇಳುತ್ತಿರುವ ‘ಜಟಾಧರ’ ಚಿತ್ರೀಕರಣ ಆರಂಭಗೊಂಡಿದ್ದು, ತೆಲುಗಿನ ‘ಹಂಟ್’, ‘ಹರೋಂ ಹರಾ’ ಖ್ಯಾತಿಯ ಸುಧೀರ್ ಬಾಬು ಈ ಚಿತ್ರದ ನಾಯಕನಾಗಿದ್ದಾರೆ. ಸದ್ಯ ಹಿಂದಿಯ ‘ವೆಲ್‌ಕಂ ಟು ದ ಜಂಗಲ್’ ಚಿತ್ರದಲ್ಲಿ ಬಿಜಿಯಿರುವ ರವೀನಾ, ಕೆಲವೇ ದಿನಗಳಲ್ಲಿ ತೆಲುಗು ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. -ಏಜೆನ್ಸೀಸ್