ನ್ಯೂಸ್

ಹೆಣ್ಣಿನ ಬಗ್ಗೆ ರಾವಣ ಹೇಳಿದ್ದ 5 ಕಠೋರ ಸತ್ಯಗಳು; ಈ ಮಾತುಗಳು ಕೆಟ್ಟದಾಗಿದ್ದರೂ ನಿಜ..!

ಈವರೆಗೂ ಭೂಮಿಯ ಮೇಲೆ ಹುಟ್ಟಿದ ಯಾವ ಪುರುಷನೂ ಹೆಣ್ನನ್ನು ಅರ್ಥ ಮಾಡಿಕೊಳ್ಲಲು ಆಗಿಲ್ಲವೆಂಬ ಮಾತಿದೆ. ಹೆಣ್ಣಿನ ಸ್ವಭಾವಗಳು ಆಕೆಯ ಆಲೋಚನೆಗಳು ಹೀಗೆ ಸಾಗುತ್ತದೆ ಎನ್ನುವುದನ್ನ ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ಜತೆಗೆ ಹೆಣ್ಣು ಪುರಷನ್ನು ಸುಲಭವಾಗಿ ಕೈಗೊಂಬೆಯನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯವನ್ನೂ ಹೊಂದಿದ್ದಾಳೆ ಎಂದು ಹೇಳಲಾಗುತ್ತದೆ.

ರಾವಣನು ಮರಣದ ಅವಸ್ಥೆಯಲ್ಲಿರುವಾಗ ಶ್ರೀರಾಮನ ತಮ್ಮನಾದ ಲಕ್ಷ್ಮಣನನ್ನು ಕರೆದು ಸ್ತ್ರೀಯರ ಬಗ್ಗೆ ಕೆಲವು ಹಿತ ನುಡಿಗಳನ್ನ ಹೇಳುತ್ತಾನೆ. ರಾವಣನ ಕಿವಿ ಮಾತನ್ನು ಆಲಿಸಿ ಬಾ ಎಂದು ಸ್ವತಃ ರಾಮನೇ ಲಕ್ಷ್ಮಣನನ್ನು ಕಳಿಸುತ್ತಾನೆ.

ಅಣ್ಣನ ಮಾತಿಗೆ ಬೆಲೆ ನೀಡುತ್ತಾ ಗೌರವಿಸುತ್ತಾ, ಲಕ್ಷ್ಮಣನು ಯುದ್ಧ ಭೂಮಿಗೆ ತೆರಳುತ್ತಾನೆ ಯುದ್ಧ ಭೂಮಿಗೆ ಹೋಗಿ ರಾವಣನ ಪಾದಕ್ಕೆ ನಮಸ್ಕರಿಸಿ ಸ್ವತಃ ರಾಮನೇ ಇಲ್ಲಿ ಕಳುಹಿಸಿರುವುದಾಗಿ ಹೇಳುತ್ತಾನೆ.

ಆಗ ರಾವಣ ಲಕ್ಷ್ಮಣನಿಗೆ ಹೆಣ್ಣಿನ ಬಗ್ಗೆ ಕೆಲವು ನಿಗೂಢ ಮಾಹಿತಿಯನ್ನ ಕಿವಿ ಮಾತಾಗಿ ಹೇಳುತ್ತಾನೆ. ಹಾಗಿದ್ರೆ ರಾವಣ ಮಹಿಳೆಯರ ಕುರಿತಂತೆ ಲಕ್ಷ್ಮಣನಿಗೆ ಹೇಳಿದ ಕಿವಿ ಮಾತು ಏನು ನೋಡೋಣ

1. ಸೌಂದರ್ಯದ ಮೇಲೆ ಅಹಂಕಾರವನ್ನು ಹೊಂದಿದ್ದ ಹೆಣ್ಣನ್ನ ಯಾವತ್ತೂ ಕೂಡ ಮದುವೆಯಾಗ ಬೇಡ. ನೋಡುವುದಕ್ಕೆ ನಿನಗಿಂತಲೂ ಕಡಿಮೆ ರೂಪಸಿಯಾದರೂ ತೊಂದರೆ ಇಲ್ಲ. ಕೆಳಮನೆತನದಿಂದ ಬಂದಿದ್ದರೂ ಕೂಡ ಆಕೆಯ ಮನಸ್ಸು ಒಳ್ಳೆಯದಾಗಿರುತ್ತದೆ ಅಂತಹವರನ್ನು ಮದುವೆಯಾಗಿ

2. ಗಂಡನ ಮಾತನ್ನು ಕೇಳುವ ಹೆಣ್ಣು ಹೆಂಡತಿಯಾಗಿ ಸಿಗುವುದು ಅತ್ಯಂತ ಅಪರೂಪ ಹೀಗಾಗಿ ಒಂದು ವೇಳೆ ಆ ರೀತಿಯ ಹೆಣ್ಣು ನಿಮಗೆ ಸಿಕ್ಕಿದರೆ ಪ್ರಪಂಚದಲ್ಲಿಯೇ ನೀವು ಅತ್ಯಂತ ಅದೃಷ್ಟವಂತ ನಿಮ್ಮ ಮಾತು ಕೇಳುವ ಮಹಿಳೆಯನ್ನೇ ವರಿಸಿ.

3. ಬಿಲ್ಲಿನ ಆಕಾರದ ಹುಬ್ಬುಗಳನ್ನು ಹೊಂದಿರುವ ಹೆಣ್ಣನ್ನು ಸುಂದರ ಮತ್ತು ಚಾರಿತ್ರ್ಯವಂತ ಮಹಿಳೆಯರ ಸಾಲಿಗೆ ರಾವಣ ಸೇರ್ಪಡೆಗೊಳಿಸುತ್ತಾನೆ. ಇನ್ನು ಇದಕ್ಕೆ ವಿರುದ್ಧವಾಗಿ ನೇರವಾದ, ಉದ್ದ, ದಪ್ಪ, ಅಲ್ಲವೇ ಅರ್ಧಕ್ಕೆ ಗೆರೆ ಬರುವಂತಹ ಹುಬ್ಬುಗಳನ್ನ ಹೊಂದಿದ್ದರೆ ಅದು ಉತ್ತಮವಲ್ಲ. ಅಂತವರನ್ನ ಮದುವೆಯಾದರೇ ಮನೆಯಲ್ಲಿ ಕಷ್ಟಗಳೇ ಹೆಚ್ಚು.

4. ಗುಳಿಕೆನ್ನೆ ಹೊಂದಿದ ಮಹಿಳೆಯನ್ನ ವರಿಸದವರೇ ನಿಜಕ್ಕೂ ಸುಖಿಗಳು. ಸುತ್ತಲೂ ಇರುವವರನ್ನ ಸಂತೋಷದಿಂದ ನೋಡಿಕೊಳ್ಳುತ್ತಾರೆ. ಸ್ವಾಭಾವಿಕವಾಗಿಯೂ ಖುಷಿಯಾಗಿರುತ್ತಾರೆ.

5. ದುಂಡಗಿನ ಮೊಗವನ್ನ ಹೊಂದಿದ ಮಹಿಳೆಯರು ಅದೃಷ್ಟಸಾಲಿ ಎಂದು ರಾವಣ ಪರಿಗಣಿಸುತ್ತಾನೆ. ಬಲವಂತವಾಗಿ ಮಹಿಳೆಯನ್ನ ವರಿಸಲು ಹೋಗಬೇಡಿ ಎಂದು ರಾವಣ ತನ್ನ ಮತ್ತು ರಂಬೆಯ ನಡುವೆ ನಡೆದ ಸನ್ನಿವೇಶವನ್ನ ನೆನೆಸಿಕೊಂಡು ಹೇಳಿದ್ದಾನೆ.

6. ಉದ್ದನೆಯ ಗಲ್ಲವನ್ನ ಹೊಂದಿರುವ ಮಹಿಳೆಯರು ಬಲು ಬೇಗನೆ ಲೌಖಿಕ ಸುಖ ಬೋಗಗಳಿಗೆ ಆಕರ್ಷಿತರಾಗುತ್ತಾರೆ. ರಾವಣ ಇವರನ್ನು ಚಾರಿತ್ರ್ಯ ಹೀನ ಮಹಿಳೆಯರ ಸಾಲಿಗೆ ಸೇರಿಸಿದ್ದಾನೆ.

7. ಉತ್ತಮ ಆಕಾರ ಮತ್ತು ಕೆಂಪು ತುಟಿಗಳನ್ನ ಹೊಂದಿರುವ ಮಹಿಳೆಯರು ಗಂಡನ ಪ್ರೀತಿಯನ್ನ ಸುಲಣವಾಗಿ ಗಳಿಸುತ್ತಾರೆ. ಈ ಮಾಹಿತಿಯನ್ನು ರಾವಣ ತನ್ನ ಹಿಂದಿನ ಅನುಭವದಿಂದ ಲಕ್ಷ್ಮಣನಿಗೆ ಹೇಳುತ್ತಾನೆ.

8. ಸ್ವತ: ತನ್ನ ಹೆಂಡತಿ ಮಂಡೋದರಿಯನ್ನ ನೆನೆಸಿಕೊಂಡ ರಾವಣ ಸ್ತ್ರೀ ಯಾವಾಗ ಬೇಕಾದರೂ ಸುಳ್ಳು ಹೇಳಬಹುದು. ಆದ್ದರಿಂದ ಆಕೆಯನ್ನ ಹೆಚ್ಚು ನಂಬಬೇಡಿ ಎಂದು ಹೇಳುತ್ತಾ ಈ ವಿಷಯವನ್ನ ಲಕ್ಷ್ಮಣನ ಮುಂದೆ ಪ್ರಸ್ತಾಪಿಸುತ್ತಾನೆ.

9. ಇನ್ನು ಮಹಿಳೆಯರಿಗೆ ರಹಸ್ಯವಾದ ವಿಚಾರಗಳನ್ನ ಹೇಳಬಾರದು. ಹೇಳಿದ್ದೇ ಆದಲ್ಲಿ ಅದು ಹೊಟ್ಟೆಯಲ್ಲೇ ಜೀರ್ಣವಾಗುವುದಿಲ್ಲ ಮತ್ತೊಬ್ಬರು ಕಿವಿಗೆ ಬಿದ್ದೇ ಬೀಳುತ್ತೆ ಹಾಗಾಗಿ ನೀವು ಯಾವುದೇ ವಿಚಾರಗಳನ್ನ ಹಂಚಿಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ.