ರಟ್ಟಿಹಳ್ಳಿ: ಎಲ್ಲ ನ್ಯಾಯಾಲಯಗಳು ಇಂಗ್ಲಿಷ್ ಭಾಷೆ ಬಿಟ್ಟು ಕನ್ನಡದಲ್ಲಿ ಕಲಾಪಗಳನ್ನು ನಡೆಸಿದರೆ ಕಕ್ಷಿದಾರರಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರ ನಂಬಿಕೆ ಮತ್ತು ಗೌರವ ಭಾವನೆ ಉಂಟಾಗುತ್ತದೆ. ಆದ್ದರಿಂದಲೆ ನಾನು ಇತ್ತೀಚೆಗೆ ಕನ್ನಡದಲ್ಲಿ ತೀರ್ಪು ಪ್ರಕಟಿಸಿದ್ದು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂತಿರ್ ಕೃಷ್ಣ ದೀಕ್ಷಿತ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನೂತನ ಸಂಚಾರ ದಿವಾಣಿ ಮತ್ತು ಜೆಎಂಎಫ್ಸಿ ನ್ಯಾಯಾಲಯ ಹಾಗೂ ವಕೀಲರ ಸಂದ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.
ನೂರಾರು ವರ್ಷಗಳ ಕಾಲ ನಮ್ಮನ್ನು ಗುಲಾಮರಂತೆ ನೋಡಿದ ಬ್ರಿಟಿಷರು ಬಿಟ್ಟು ಹೋದ ಇಂಗ್ಲಿಷ್ ಭಾಷೆ ನಮಗೆ ಅನವಶ್ಯಕವಾಗಿದೆ. ನಮ್ಮ ಮಾತೃ ಭಾಷೆ ಕನ್ನಡವಾಗಿದ್ದು, ನಮ್ಮ ಮಾತೃ ಭಾಷೆಯನ್ನು ನಾವೆ ಕಡೆಗಣಿಸುವುದು ಸರಿಯಲ್ಲ. ನ್ಯಾಯಾಲಯಗಳಿಂದ ಮನೆ ಬಾಗಿಲಿಗೆ ನ್ಯಾಯ ಮತ್ತು ತ್ವರಿತಗತಿಯಲ್ಲಿ ನ್ಯಾಯ ಸಿಗುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕುಸಿಯುತ್ತಿದ್ದು, ಪರ್ಯಾಯ ವ್ಯವಸ್ಥೆಗೆ ಸಾರ್ವಜನಿಕರು ಕಟ್ಟೆ ಪಂಚಾಯತಿ ಹಾಗೂ ಪರ್ಯಾಯ ನ್ಯಾಯಾಂಗಕ್ಕೆ ಮೋರೆ ಹೋಗುತ್ತಿರುವುದು ಮಾರಕವಾಗಿದೆ. ನ್ಯಾಯಾಲಯಗಳು ಜನರ ಸಮಸ್ಯೆಗಳನ್ನು ಬೇಗ ಇತ್ಯರ್ಥ ಮಾಡುವ ಮೂಲಕ ನ್ಯಾಯಾಂಗದ ಮೇಲೆ ನಂಬಿಕೆ ಕಳೆದುಕೊಳ್ಳದಂತಾಗಬೇಕು ಎಂದರು.
ಸಮಾಜದಲ್ಲಿ ಅನೇಕ ವರ್ಷಗಳಿಂದ ತುಳಿತಕ್ಕೋಳಪಟ್ಟವರು, ಬಡವರು, ಅಬಲೆಯರು ಹಾಗೂ ರೈತ ಸಮುದಾಯಕ್ಕೆ ನ್ಯಾಯಾಲಯದ ಮೇಲೆ ನಂಬಿಕೆ ಬರುವಂತೆ ವಕೀಲರು ಮತ್ತು ನ್ಯಾಯಾಧೀಶರು ನಡೆದುಕೊಳ್ಳುವ ಮೂಲಕ ನಮ್ಮ ಕರ್ತವ್ಯದ ಜವಾಬ್ದಾರಿ ಮೆರೆಯುವುದು ತುಂಬ ಅವಶ್ಯಕತೆಯಿದೆ ಎಂದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಹಿರೇಕೆರೂರ ಕೋರ್ಟ್ನಲ್ಲಿ ರಟ್ಟಿಹಳ್ಳಿ ತಾಲೂಕಿಗೆ ಸಂಬಂಧಿಸಿದ ಶೇ. 60ರಷ್ಟು ಪ್ರಕರಣಗಳಿರುವುದರಿಂದ ಈ ಭಾಗದ ವಕೀಲರು ರಾಜಕೀಯ ನಾಯಕರು, ಸಂ ಸಂಸ್ಥೆಗಳ ಪ್ರತ್ಯೇಕ ಕೋರ್ಟ್ ಬೇಕೆಂಬ ಹೋರಾಟದ ಫಲವಾಗಿ ಇಂದು ತಾಲೂಕಿಗೆ ನೂತನ ಸಂಚಾರ ದಿವಾಣಿ ಮತ್ತು ಜೆಎಂಎಫ್ಸಿ ನ್ಯಾಯಾಲಯ ದೊರೆತಿದೆ.
ನೂತನ ಸಂಚಾರ ಪೀಠ ವಾರದ ಪೂತಿರ್ ದಿನಗಳು ನಡೆಯಲಿ. ಪಟ್ಟಣದ ಕೆಇಬಿ ಮುಂಭಾಗದಲ್ಲಿನ ಸರ್ಕಾರಿ ಜಾಗದಲ್ಲಿ ಕೋರ್ಟ್ ಹಾಗೂ ನ್ಯಾಯಾಧೀಶರ ವಸತಿಗಾಗಿ 3.20 ಎಕರೆ ಜಾಗ ಮಂಜೂರಾಗಿದೆ. ಲೋಕೋಪಯೋಗಿ ಸಚಿವರೊಂದಿಗೆ ಮಾತನಾಡಿ ಮುಂದಿನ ದಿನದಲ್ಲಿ ಕಟ್ಟಡ ನಿಮಿರ್ಸಲಾಗುವುದು ಎಂದರು.
ಹೈಕೋರ್ಟ್ನ ಆಡಳಿತಾತ್ಮಕ ನ್ಯಾಯಮೂತಿರ್ ಹೇಮಂತ ಚಂದನಗೌಡರ, ಮಾಜಿ ಶಾಸಕ ಹಾಗೂ ನೂತನ ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬನ್ನಿಕೋಡ ಮಾತನಾಡಿದರು.
ಹಾವೇರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ, ವಕೀಲರ ಸಂಘದ ಉಪಾಧ್ಯಕ್ಷ ಎಸ್.ವಿ. ತೊಗಸಿರ್, ಕಾರ್ಯದಶಿರ್ ಎಂ.ಬಿ. ಜೋಕನಾಳ, ಲೋಕೋಪಯೋಗಿ ಇಂಜಿನಿಯರ್ ಎನ್.ಎನ್. ಪಾಟೀಲ, ಸುನೀಲ ಹೊಸಮನಿ, ಪಿ.ಡಿ ಬಸನಗೌಡ್ರ, ಬಿ.ಸಿ. ಪಾಟೀಲ, ಪಕ್ಕೀರೇಶ ತುಮ್ಮಿನಕಟ್ಟಿ, ಚಂದನಾ ಕಬ್ಬಿಣಕಂತಿಮಠ, ಬಿ.ಬಿ. ಗುಬ್ಬಿ, ವಿಜಯ ಗೋಳಪ್ಪನವರ, ಸಂತೋಷ ಪಾಟೀಲ, ಎನ್.ಆರ್. ಕೋಣನತಲಿ ಮತ್ತಿತರರು ಉಪಸ್ಥಿತರಿದ್ದರು.