ನ್ಯೂಸ್

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆ. 15ರಂದು

Haveri - Kariyappa Aralikatti

ರಾಣೆಬೆನ್ನೂರ: ನಗರದ ಗಂಗಾ ವಿವಿಧ ಉದ್ದೇಶಗಳ ಸಹಕಾರ ಸಂಘ ಆಶ್ರಯದಲ್ಲಿ ದಿ. ದೇವರಾಜ ಅರಸು ಅವರ 108ನೇ ಹುಟ್ಟು ಹಬ್ಬದ ಪ್ರಯುಕ್ತ ಆ. 15ರಂದು ಬೆಳಗ್ಗೆ 10 ಗಂಟೆಗೆ ನಗರದ ಕರಾವಳಿ ಸಭಾಭವನದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ರತ್ನಾಕರ ಕುಂದಾಪುರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಅವರನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ. ಅಥಣಿ ತಾಲೂಕಿನ ಅಲ್ಲಮಪ್ರಭು ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ವೈದ್ಯ ನಾಗರಾಜ ಡೊಡ್ಮನಿ ಉದ್ಘಾಟಿಸುವರು. ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಹರಿಓಂ ಸುಧಾಕರ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಉಪನ್ಯಾಸಕ ಡಾ. ಕಾಂತೇಶ ಅಂಬಿಗೇರ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದರು.
ಪ್ರಮುಖರಾದ ಕೃಷ್ಣಮೂರ್ತಿ ಸುಣಗಾರ, ಬಾಬಣ್ಣ ಕಾವಡೆ, ಸುರೇಶ ಜಾಡಮಲಿ, ವೀರಣ್ಣ ಬಾರ್ಕಿ, ಕೊಟ್ರೇಶ ಕುಂದಾಪುರ, ಲಕ್ಷ್ಮಣ ಸುಣಗಾರ, ವಾಸುದೇವ ಗುಪ್ತ, ಲಕ್ಷ್ಮಣ ದಾಸರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.