ನ್ಯೂಸ್

ಪಡಿತರ ಚೀಟಿ ರದ್ದು ಮಾಡಲ್ಲ

ಕಿರುವಾರ ಎಸ್.ಸುದರ್ಶನ್

ಕೋಲಾರ: ಅನರ್ಹರಲ್ಲದವರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದು, ಇದನ್ನು ಪರಿಶೀಲನೆ ಮಾಡಿ ಎಪಿಎಲ್‌ಗೆ ವರ್ಗಾಯಿಸಲಾಗುತ್ತಿದೆ ಹೊರತು ಯಾವುದೇ ಕಾರ್ಡ್ಗಳನ್ನು ರದ್ದುಗೊಳಿಸುತ್ತಿಲ್ಲ ಎಂದು ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.70-80 ಬಿಪಿಎಲ್ ಕಾರ್ಡ್ಗಳು ಇರಲು ಸಾಧ್ಯವಿಲ್ಲ. ಈ ಪ್ರಶ್ನೆ ಉದ್ಬವಿಸಿದ್ದು, ವೈಜ್ಞಾನಿಕವಾಗಿ ಅಲೋಚಿಸಿಯೇ ಕ್ರಮವಹಿಸಲಾಗುತ್ತಿದೆ ಎಂದರು.

ದಕ್ಷಿಣಭಾಗದಲ್ಲಿ ಕೇರಳ, ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಶೇ.೫೦ ಮಾತ್ರ ಬಿಪಿಎಲ್ ಕಾರ್ಡ್ಗಳು ಇವೆ. ಕರ್ನಾಟಕ ಆರ್ಥಿಕವಾಗಿ ಸುಭದ್ರವಾಗಿದೆ. ದೇಶದಲ್ಲಿ ತೆರಿಗೆ ಪಾವತಿಯಲ್ಲಿ ಮಹಾರಾಷ್ಟ್ರ ನಂತರ, ಕರ್ನಾಟಕ ಇದೆ. ಇಂತಹದರಲ್ಲಿ ಶೇ.70-80 ಬಿಪಿಎಲ್ ಇರಲು ಸಾಧ್ಯನಾ? ಎಂದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲು ಮುಂದಾಗಿತ್ತು. ಈಗ ನಮ್ಮ ಸರ್ಕಾರವು ಬದಲಾವಣೆಗೆ ಆಲೋಚಿಸಿದೆ. ಬಿಪಿಎಲ್‌ಗೆ ಅರ್ಹರಲ್ಲದವರನ್ನು ಎಪಿಎಲ್‌ಗೆ ವರ್ಗಾವಣೆ ಮಾಡುತ್ತಿದೆ. ಸರ್ಕಾರಿ ಕೆಲಸ, ತೆರಿಗೆ ಪಾವತಿ ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಆದಾಯ ಇರುವರನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಬಗ್ಗೆ ಅಂಕಿ-ಅAಶವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಮುನಿಯಪ್ಪ ಹೇಳಿದರು.

ಬಡವರು ಯಾರಾದರು ವಂಚನೆಗೆ ಒಳಗಾದರೆ ತಕ್ಷಣ ತಹಸೀಲ್ದಾರರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದರೆ ಒಂದು ವಾರದಲ್ಲಿ ವಾಪಸ್ ಕೊಡಿಸಲಾಗುವುದು. ಆರೋಗ್ಯಸೇವೆಯು ಎಲ್ಲರಿಗೂ ಅವಶ್ಯಕತೆಯಿದೆ. ತುರ್ತು ಸೇವೆ ಆಧಾರದಲ್ಲಿ ನೀಡಲಾಗುವುದು ಎಂದರು.

ಬಿಜೆಪಿ ಮಾಡುತ್ತಿರುವ ಆರೋಪಗಳಲ್ಲಿ ಸತ್ಯವಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಇದ್ದು, ಇಲಾಖೆಗೆ ̧8000 ಕೋಟಿ ರೂ. ನೀಡಿದ್ದಾರೆ. ಕಳೆದ ತಿಂಗಳು ಡಿಬಿಟಿ ಮಾಡಲು ತಾಂತ್ರಿಕ ದೋಷ ಎದುರಾಗಿತ್ತು, ಸಮಸ್ಯೆ ಇತ್ಯರ್ಥವಾಗಿದ್ದು, ಸಕಾಲಕ್ಕೆ ಡಿಬಿಟಿ ಆಗುತ್ತಿದೆ ಎಂದು ಮುನಿಯಪ್ಪ ತಿಳಿಸಿದರು.

ಆರ್ಥಿಕ ಸಮತೋಲನ ಹೇಗೆ ಮಾಡಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಬಿಜೆಪಿಯವರು ಸುಮ್ಮನೆ ಅಪಾದನೆ ಮಾಡುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಮಾಡಿರುವ ಸಾಲವನ್ನು ತೀರಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

ನಬಾರ್ಡ್ಗೆ ಸಿಎಂ ಪತ್ರ

ನಬಾರ್ಡ್ ಬ್ಯಾಂಕಿನಿMದ ರಾಜ್ಯಕ್ಕೆ ಸಾಲ ನೀಡುತ್ತಿಲ್ಲ. ಈ ಬಗ್ಗೆ ಸಹಕಾರ ಇಲಾಖೆ ಸಚಿವರು, ವ್ಯವಸಾಯ ಸಚಿವರು ಸ್ಪಷ್ಟನೆ ನೀಡಿದ್ದಾರೆ. ರಾಜ್ಯಕ್ಕೆ ಕೊಡಬೇಕಾಗಿರುವ ಸೌಲಭ್ಯ ನೀಡಲೇಬೇಕು. ಪ್ರತ್ಯೇಕ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಿಎಂ ಸಹ ಪತ್ರ ಬರೆಯಲಿದ್ದಾರೆ ಎಂದು ಮುನಿಯಪ್ಪ ತಿಳಿಸಿದರು.

ಮಾಜಿ ಶಾಸಕ ರಮೇಶ್ ಕುಮಾರ್ ಅವರು ಅರಣ್ಯ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಮುನಿಯಪ್ಪ, ಒತ್ತುವರಿ ತೆರವು ಕಾರ್ಯ ಈಗಾಗಲೇ ಶುರು ಮಾಡಿದ್ದು, ಕಾನೂನು ಪ್ರಕಾರ ಅಽಕಾರಿಗಳು ಕ್ರಮವಹಿಸುತ್ತಾರೆ. ಅರಣ್ಯ ಜಮೀನು ಎಂದು ಒಂದು ಭಾರಿ ತೀರ್ಮಾನವಾದರೆ ಅದು ಅರಣ್ಯ ಇಲಾಖೆಯದ್ದೇ. ಸರ್ಕಾರ ಇದ್ದು, ಸಮಯಕ್ಕೆ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಮುನಿಯಪ್ಪ ಉತ್ತರಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್‌ನಲ್ಲಿನ ಅಪಸ್ವರದ ಕುರಿತು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಯಾವ ಉದ್ದೇಶ ಇಟ್ಟುಕೊಂಡು ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ, ಕಾಂಗ್ರೆಸ್‌ಗೆ ಹಲವು ದಶಕಗಳ ಇತಿಹಾಸ ಇದೆ. ವ್ಯತ್ಯಾಸಗಳನ್ನು ಸಚಿವರು ಸರಿಪಡಿಸುತ್ತಾರೆ ಎಂದು ಮುನಿಯಪ್ಪ ತಿಳಿಸಿದರು.