ಧಾರವಾಡ: ರಥೋತ್ಸವ ಸಂದರ್ಭದಲ್ಲಿ ತೇರಿಗೆ ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣು, ಧವನ, ಹೂವು ಎಸೆದು ಇಷ್ಟಾರ್ಥ ಸಿದ್ಧಿಗೆ ಬೇಡಿಕೊಳ್ಳುವುದು ಸಾಮಾನ್ಯ.
ಆದರೆ, ಗರಗದ ಶ್ರೀಗುರು ಮಡಿವಾಳೇಶ್ವರ ಜಾತ್ರೆಯಲ್ಲಿ ಸಚಿನ್ ಕ್ಯಾತನವರ ಎಂಬ ಯುವಕ, ‘ಈ ವರ್ಷವಾದ್ರೂ ಮದುವೆ ಫಿಕ್ಸ್ ಮಾಡಪ್ಪ...’ ಎಂದು ಬಾಳೆಹಣ್ಣಿನ ಮೇಲೆ ಬರೆದು ದೇವರಲ್ಲಿ ಪ್ರಾರ್ಥಿಸಿ ತೇರಿಗೆ ಎಸೆದಿದ್ದಾನೆ. ಈ ಕೋರಿಕೆಯನ್ನು ವಿಡಿಯೋ ಮಾಡಿ ಟಿಕ್ಟಾಕ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, 1.60 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.