ರಶ್ಮಿಕಾ ಮಂದಣ್ಣ- ಶಿವಕಾರ್ತಿಕೆಯನ್ 
ನ್ಯೂಸ್

ರಶ್ಮಿಕಾ ಮಂದಣ್ಣ ಕೈತಪ್ಪಿತು ಬಹುನಿರೀಕ್ಷಿತ ಸಿನಿಮಾ! ತಮಿಳು ನಟನ ಚಿತ್ರಕ್ಕೆ ಕನ್ನಡತಿ ಶ್ರೀಲೀಲಾ ನಾಯಕಿ​

ಪ್ರಮುಖ ಮುಖ್ಯಾಂಶಗಳು

  • ಶಿವಕಾರ್ತಿಕೆಯನ್ ಅಭಿನಯಿಸಲಿರುವ ಮುಂಬರುವ ಸಿನಿಮಾ
  • ರಶ್ಮಿಕಾ ಬದಲಿಗೆ ಕನ್ನಡತಿ ಶ್ರೀಲೀಲಾ
ಬೆಂಗಳೂರು: ತಮಿಳು ಮತ್ತು ತೆಲುಗಿನಲ್ಲಿ ತಮ್ಮ ಬೇಡಿಕೆಯನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿರುವ ಸ್ಟಾರ್ ನಟ ಶಿವ ಕಾರ್ತಿಕೇಯನ್, ಇದೀಗ ಮತ್ತೊಂದು ಹೊಸ ಚಿತ್ರದಲ್ಲಿ ಸಖತ್ ಬಿಜಿಯಾಗಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಮೊದಲು ಆಯ್ಕೆಯಾಗಿದ್ದ ರಶ್ಮಿಕಾ ಮಂದಣ್ಣರನ್ನು ಕೈಬಿಟ್ಟಿರುವ ಚಿತ್ರತಂಡ, ಅವರ ಸ್ಥಾನಕ್ಕೆ ಕನ್ನಡತಿ ಶ್ರೀಲೀಲಾ ಅವರಿಗೆ ಅವಕಾಶ ನೀಡಿದೆ.
ಇತ್ತೀಚೆಗಷ್ಟೇ, ಶಿವ ಕಾರ್ತಿಕೇಯನ್ ಅಭಿನಯದ 'ಮದರಾಸಿ' ಚಿತ್ರವು ಭರ್ಜರಿ ಓಪನಿಂಗ್ ಪಡೆದಿದ್ದೇ ಆದರೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಎ.ಆರ್. ಮುರುಗದಾಸ್ ನಿರ್ದೇಶನದ ಈ ಚಿತ್ರವು ಫ್ಲಾಪ್ ಟಾಕ್​ಗೆ ಗುರಿಯಾಯಿತು. ಮದರಾಸಿ ಸೋಲಿನ ಬಳಿಕ ಸಖತ್ ಕಮ್​ಬ್ಯಾಕ್ ಮಾಡಲು ಹೊರಟಿರುವ ಶಿವಕಾರ್ತಿಕೆಯನ್​, ಪ್ರಸ್ತುತ, ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪರಾಶಕ್ತಿ ಚಿತ್ರದಲ್ಲಿ ನಿರತರಾಗಿದ್ದಾರೆ.
ಈ ಚಿತ್ರಕ್ಕೂ ಮೊದಲು ಶಿವ ಕಾರ್ತಿಕೇಯನ್-ಶ್ರೀಲೀಲಾ ಜೋಡಿ ನಟಿಸಿರುವ ಮತ್ತೊಂದು ಸಿನಿಮಾದ ಕೆಲಸಗಳು ಬಲು ಜೋರಾಗಿವೆ. ಪ್ರಸ್ತುತ, ಈ ಸುದ್ದಿ ತಮಿಳು ವಲಯಗಳಲ್ಲಿ ಹರಿದಾಡುತ್ತಿದೆ. ಅಂದರೆ, 'ಡಾನ್' ಚಿತ್ರ ಶಿವ ಕಾರ್ತಿಕೇಯನ್ ಅವರ ವೃತ್ತಿಜೀವನದ ಬ್ಲಾಕ್ಬಸ್ಟರ್ ಹಿಟ್ ಚಿತ್ರಗಳ ಪಟ್ಟಿಯಲ್ಲಿದೆ. ಸಿಬಿ ಚಕ್ರವರ್ತಿ ನಿರ್ದೇಶನದ ಈ ಚಿತ್ರವು 100 ಕೋಟಿ ರೂ. ಗಳಿಕೆ ಮಾಡಿ ಸೂಪರ್ ಹಿಟ್ ಆಯಿತು.
ಈಗ ಈ ಕಾಂಬೊ ಮತ್ತೊಮ್ಮೆ ತೆರೆ ಮೇಲೆ ಬರಲಿದೆ. ಚಿತ್ರ ಮತ್ತೊಮ್ಮೆ ಕಾಲೇಜು ಹಿನ್ನೆಲೆಯಲ್ಲಿ ಔಟ್ ಅಂಡ್ ಔಟ್ ಎಂಟರ್ಟೈನರ್ ಆಗಲಿದ್ದು, ತಯಾರಕರು ಆರಂಭದಲ್ಲಿ ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರನ್ನು ನಾಯಕಿಯಾಗಿ ಪರಿಗಣಿಸಿತ್ತು. ಆದರೆ, ಕೆಲವು ಕಾರಣಗಳಿಂದಾಗಿ, ಚಿತ್ರತಂಡ ರಶ್ಮಿಕಾರನ್ನು ಕೈಬಿಟ್ಟು, ಕನ್ನಡತಿ ಶ್ರೀಲೀಲಾ ಅವರಿಗೆ ಅವಕಾಶವನ್ನು ನೀಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವುದು ಬಾಕಿಯಿದೆ,(ಏಜೆನ್ಸೀಸ್).