ಮುಂಬೈ: 2021 ರಲ್ಲಿ ಬಿಡುಗಡೆಯಾದ 'ಪುಷ್ಪ: ದಿ ರೈಸ್' ಮ್ಯಾಜಿಕ್ ಮೂರು ವರ್ಷಗಳ ನಂತರವೂ ಮುಂದುವರಿಯುತ್ತಿದೆ. ಇಷ್ಟರಲ್ಲಿಯೇ ತಿಳಿಯಲಿದೆ ಜನರು ಯಾವ ಪರಿ ಸಿನಿಮಾ ಇಷ್ಟಪಟ್ಟಿದ್ದಾರೆಂದು. ಇದರಲ್ಲಿ ಅಲ್ಲು ಅರ್ಜುನ್ ಪಾತ್ರದ ಬಗ್ಗೆಯೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ರಶ್ಮಿಕಾ ಮಂದಣ್ಣ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಅವರ ನಟನೆಯೂ ಜನಮನ ಗೆದ್ದಿತ್ತು. ಇದೀಗ ಪುಷ್ಪ ಮುಂದಿನ ಸೀಕ್ವೆಲ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸದ್ಯ ಈ ಚಿತ್ರದ ಪೋಸ್ಟರ್ ಮತ್ತು ಟೀಸರ್ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದು, ಸಿನಿಮಾವು ಈ ವರ್ಷ ಬಿಡುಗಡೆಯಾಗಲಿದೆ. ವೇಗವಾಗಿ ಚಿತ್ರೀಕರಣವನ್ನು ಪೂರ್ಣಗೊಳಿಸುವಲ್ಲಿ ಪ್ರತಿಯೊಬ್ಬರು ಬ್ಯೂಸಿಯಾಗಿದ್ದಾರೆ. ಹೌದು, ಇತ್ತೀಚೆಗೆ 'ಪುಷ್ಪ 2' ಸೆಟ್‌ನಿಂದ ರಶ್ಮಿಕಾ ಮಂದಣ್ಣ ಅವರ ಫೋಟೋ ಹೆಚ್ಚು ವೈರಲ್ ಆಗುತ್ತಿದೆ.
ವಧುವಾದ ರಶ್ಮಿಕಾ
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಂಚಲನ ಮೂಡಿಸಿದೆ. ಇದನ್ನು ನೋಡಿದ ಅಭಿಮಾನಿಗಳು ಮತ್ತಷ್ಟು ಸಂಭ್ರಮಿಸಿದ್ದಾರೆ. ಈ ವೈರಲ್ ಫೋಟೋದಲ್ಲಿ ರಶ್ಮಿಕಾ ಕೆಂಪು ಸೀರೆ, ವರ್ಮಿಲಿಯನ್ ಮತ್ತು ಭಾರೀ ಆಭರಣಗಳನ್ನು ಧರಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಈ ಗೆಟಪ್ 'ಪುಷ್ಪ 2' ಸಿನಿಮಾದ ಮದುವೆ ಸೀಕ್ವೆನ್ಸ್‌ಗಾಗಿ. ಈ ಭಾಗದಲ್ಲಿ ಪುಷ್ಪ ಪತ್ನಿ ‘ಶ್ರೀವಲ್ಲಿ’ ಎಂಬುದು ಸ್ಪಷ್ಟವಾಗಿದ್ದು, ಅಲ್ಲಿಗೆ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ. ಇಲ್ಲಿಂದ ಚಿತ್ರದ ಕಥೆ ಸಾಗಲಿದೆ. ಪುಷ್ಪರಾಜ್ ತನ್ನ ವೈವಾಹಿಕ ಜೀವನದಲ್ಲಿ ಹೇಗಿರುತ್ತಾನೆ ಎಂಬುದರಿಂದ ಹಿಡಿದು ಅನೇಕ ತಿರುವುಗಳನ್ನು ನೀವು ಈ ಕಥೆಯಲ್ಲಿ ನೋಡಬಹುದು.
ಹೀಗಿದೆ ರಶ್ಮಿಕಾ-ಅಲ್ಲು ಅರ್ಜುನ್ ಲುಕ್
ರಶ್ಮಿಕಾ ಮಂದಣ್ಣ ಅವರ ಈ ಲುಕ್ ಅದ್ಭುತವಾಗಿದೆ. ರಶ್ಮಿಕಾ ಚಿನ್ನದ ಆಭರಣಗಳು ಮತ್ತು ಕೆಂಪು ಸೀರೆಯಲ್ಲಿ ದಕ್ಷಿಣ ಭಾರತದ ಸುಂದರ ವಧುವಿನಂತೆ ಕಂಗೊಳಿಸುತ್ತಾರೆ. ಕೈಯಲ್ಲಿ ಹಸಿರು ಮತ್ತು ಕೆಂಪು ಬಳೆಗಳ ಜೊತೆಗೆ ಕನಕಾಂಬರವನ್ನು ಮುಡಿದಿದ್ದಾರೆ. ಹೆಚ್ಚಿನ ಭದ್ರತೆಯ ನಡುವೆ ಆಕೆ ಮುಂದೆ ಸಾಗುತ್ತಿರುವುದನ್ನು ಕಾಣಬಹುದು. ಅಲ್ಲು ಅರ್ಜುನ್‌ನ ವಿಡಿಯೋ ಕೂಡ ಸೆಟ್‌ನಿಂದ ಹೊರಬಿದ್ದಿದೆ, ಅದರಲ್ಲಿ ಅವರು ಧೋತಿ ಮತ್ತು ಕುರ್ತಾ ಧರಿಸಿದ್ದಾರೆ. ಅವರ ಪುಷ್ಪರಾಜ್ ಶೈಲಿ ಇದರಲ್ಲಿ ಗೋಚರಿಸುತ್ತದೆ.
ಈ ದಿನ ಬಿಡುಗಡೆಯಾಗಲಿದೆ ಚಿತ್ರ
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2' ಸಿನಿಮಾ ಆಗಸ್ಟ್ 15, 2024 ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ. ರಶ್ಮಿಕಾ ಕೊನೆಯದಾಗಿ ರಣಬೀರ್ ಕಪೂರ್ ಜೊತೆ 'ಅನಿಮಲ್' ನಲ್ಲಿ ಕಾಣಿಸಿಕೊಂಡರು. ಈ ಚಿತ್ರ ದೇಶಾದ್ಯಂತ ಹೆಚ್ಚು ಜನಪ್ರಿಯಗೊಂಡಿತು.