ನ್ಯೂಸ್

ರಣ್​​​ಬೀರ್​-ರಶ್ಮಿಕಾ ಲಿಪ್​​ಲಾಕ್​​ ​​ಪೋಸ್ಟರ್​​​ ವೈರಲ್​​, ನಾಳೆ ಅನಿಮಲ್​​ ಸಿನಿಮಾದ ಮತ್ತೊಂದು ಹಾಡು ರಿಲೀಸ್​​..!

ಬಾಲಿವುಡ್​ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅನಿಮಲ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ಇದೀಗ ರಣ್​ಬೀರ್​​-ರಶ್ಮಿಕಾ ಲಿಪ್​ಲಾಕ್​ ಮಾಡಿದ ಪೋಸ್ಟರ್​​​ ವೈರಲ್​ ಆಗಿದೆ. ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿರುವ ‘ಅನಿಮಲ್’ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇದೆ. ಈ ಹಿಂದೆ ಸಿನಿಮಾ ರಿಲೀಸ್ ಡೇಟ್ ಮುಂದೂಡಿದ್ರು.


ಅನಿಮಲ್ ಸಿನಿಮಾದ ಹುವಾ ಮೈನ್ ಹಾಡನ್ನು ನಾಳೆ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದೆ. ನಟ ರಣಬೀರ್ ಕಪೂರ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಹಾಡಿನ ಪೋಸ್ಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಪೋಸ್ಟರ್​​​​ ಕಂಡು ನೆಟ್ಟಿಗರು ನಾನಾ ಕಾಮೆಂಟ್​​ಗಳನ್ನ ಮಾಡುತ್ತಿದ್ದಾರೆ.


ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ಪೋಸ್ಟರ್ ನಲ್ಲಿ ಅವರು ರಣ್​ಬೀರ್​ಗೆ ಕಿಸ್​ ಮಾಡಿದ್ದಾರೆ. ಲಿಪ್​ಲಾಕ್​​​ನ ಪೋಸ್ಟರ್​​ ಅಭಿಮಾನಿಗಳನ್ನು ಮತ್ತಷ್ಟು ಕುತೂಹಲಕ್ಕೆ ಒಯ್ದಿದೆ. ರಶ್ಮಿಕಾ ಲಿಪ್ ಕಿಸ್ ಪೋಸ್ಟರ್ ನೋಡಿದ ನೆಟ್ಟಿಗರು ಅನಿಮಲ್​ ಸಿನಿಮಾದ ಈ ಹಾಡಿನ ರಿಲೀಸ್​​ಗೆ ಕಾಯುತ್ತಿದ್ದು, ನಾಳೆಯೇ ಸಾಂಗ್​​ ಬಿಡುಗಡೆಯಾಗಲಿದೆ.


ಡಿಸೆಂಬರ್ 1 ರಂದು ‘ಅನಿಮಲ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಬಗ್ಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದರು.


ಗುಣಮಟ್ಟದ ಸಿನಿಮಾವನ್ನು ನೀಡಬೇಕು ಎಂಬ ಕಾರಣಕ್ಕೆ ನಿರ್ದೇಶಕ ಸಂದೀಪ್​​ ರೆಡ್ಡಿ ಹೆಚ್ಚು ಕಾಲಾವಕಾಶ ತೆಗೆದುಕೊಂಡಿದ್ದಾರೆ. ಚಿತ್ರದಲ್ಲಿ ಒಟ್ಟು 7 ಹಾಡುಗಳು ಇವೆ. ಪ್ರತಿ ಭಾಷೆಯ ಹಾಡುಗಳು ಪ್ರತ್ಯೇಕವಾಗಿ ಸಿದ್ಧವಾಗುತ್ತಿವೆ. ಎಲ್ಲವನ್ನೂ ಸೇರಿದರೆ 35 ಹಾಡುಗಳು ಆಗಲಿವೆ.


ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಟ್ರಿಪ್ಟಿ ಡಿಮ್ರಿ ನಟಿಸಿದ್ದಾರೆ.ರಶ್ಮಿಕಾ ಮಂದಣ್ಣ ಅವರು ಇಲ್ಲಿಯವರೆಗೂ 18 ಸಿನಿಮಾಗಳನ್ನು ಮಾಡಿದ್ದಾರೆ. ಎಲ್ಲಾ ಸಿನಿಮಾಗಳಲ್ಲಿ ಅವರು ಗ್ಲಾಮರ್ ಆಗಿ ಮಿಂಚಿದ್ದಾರೆ. ಇದೇ ಮೊದಲ ಬಾರಿ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.