ನ್ಯೂಸ್

ರಶ್ಮಿಕಾ ಧರಿಸಿರುವ ಸೀರೆ ನೋಡಲು ಸಿಂಪಲ್..ಆದರೆ ಸಖತ್​ ದುಬಾರಿ!

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್‌ನಲ್ಲಿ ತಮ್ಮ ಅಸಿಸ್ಟೆಂಟ್ಬ ಆಗಿರುವ ಸಾಯಿ ಮದುವೆಯಲ್ಲಿ ಕಾಣಿಸಿಕೊಂಡರು. ಈ ವಿವಾಹ ಸಮಾರಂಭದ ವಿಡಿಯೋಗಳು ವೈರಲ್​ ಆಗಿವೆ. ಈ ಸಮಾರಂಭದಲ್ಲಿ ರಶ್ಮಿಕಾ ಧರಿಸಿದ್ದ ಸೀರೆ ಕೂಡ ಎಲ್ಲರ ಗಮನಸೆಳೆದಿದೆ.

ರಶ್ಮಿಕಾ ತಮ್ಮ ಸಹಾಯಕ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ಮದುವೆಗೆ ರಶ್ಮಿಕಾ ಸೀರೆ ಉಟ್ಟು ಹಾಜರಾಗಿದ್ದರು. ಇದೀಗ ಈ ಸೀರೆಯ ಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿದೆ.

ರಶ್ಮಿಕಾ ಮಂದಣ್ಣ ಹಳದಿ ಸೀರೆಯನ್ನು ಧರಿಸಿರುವುದನ್ನು ಕಾಣಬಹುದು. ಸಿಂಪಲ್ ಸ್ಯಾರಿ ಧರಿಸಿದ ರಶ್ಮಿಕಾ ಸನ್​ ಗ್ಲಾಸ್​​ ಹಾಕಿ ಫ್ರಿ ಹೇರ್​ ಬಿಟ್ಟು ಸಖತ್​ ಕ್ಯೂಟ್​​ ಆಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಸ್ಟಾರ್​​ ಹೀರೋಯಿನ್​ ಆಗಿದ್ದರು ಸಿಂಪಲ್​​ ಲುಕ್​ನಲ್ಲಿ ಕಾಣಿಸಿಕೊಂಡಿರುವುದನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ರಶ್ಮಿಕಾ ಧರಿಸಿರುವ ಸೀರೆ ಮೇಲೆ ಹೆಂಗಳೆಯರ ಕಣ್ಣು ಬಿದ್ದಿದೆ. ಈ ಸೀರೆ ಬೆಲೆ ಎಷ್ಟು ಎಂದು ಹುಡುಕಾಡಿದ್ದಾರೆ. ಆ ಸೀರೆಯ ಬೆಲೆ ಸುಮಾರು 35 ಸಾವಿರ ಇರಲಿದೆಯಂತೆ. ಡಿಸೈನರ್ ಅನಿತಾ ಡೋಂಗ್ರೆ ಮಿಧಾ ವಿನ್ಯಾಸಗೊಳಿಸಿದ ಆರೆಂಜ್ ಕಲರ್ ಸೀರೆಯಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

ರಶ್ಮಿಕಾ ಸಖತ್ ಬ್ಯುಸಿಯಾಗಿರುವ ಹೀರೋಯಿನ್. ತಮ್ಮ ಕೆಲಸಗಳ ನಡುವೆ ಸಾಯಿಗೋಸ್ಕರ ಕೊಂಚ ಬಿಡುವು ಮಾಡಿಕೊಂಡು ಮದುವೆಗೆ ಹಾಜರಿ ಹಾಕಿದ್ದಾರೆ. ನವದಂಪತಿ ಆಶೀರ್ವಾದ ಪಡೆಯಲು ನಟಿಯ ಕಾಲಿಗೆ ನಮಸ್ಕರಿಸಿದ್ದಾರೆ. ಈ ವೇಳೆ ರಶ್ಮಿಕಾ ಮಂದಣ್ಣಗೆ ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ. ಸಾಯಿ ಹಾಗೂ ಅವರ ಪತ್ನಿ ಕಾಲಿಗೆ ನಮಿಸಿದ್ದನ್ನು ನೋಡಿ ರಶ್ಮಿಕಾಗೆ ನಾಚಿಕೆ ಆಗಿದೆ. ಶ್ರೀವಲ್ಲಿ ತುಂಬಾ ಮುಗ್ಧೆ ಎಂದು ಫ್ಯಾನ್ಸ್ ಕೊಂಡಾಡಿದ್ದಾರೆ.