ಬಂಟ್ವಾಳ: ತಾಲೂಕಿನ ಕಾವಳಕಟ್ಟೆಯ ನೌಶಾದ್ ಮನೆ ಬಳಿ ಅಪರೂಪದ ಬಿಳಿ ಹೆಬ್ಬಾವು ಪತ್ತೆಯಾಗಿದೆ.
ಸಾಮಾನ್ಯವಾಗಿ ಬಿಳಿ ಬಣ್ಣದ ಹಾವು ಹೆಚ್ಚು ಸಮಯ ಬದುಕುವುದಿಲ್ಲ. ಉಳಿದ ಹಾವುಗಳು ಬಣ್ಣದ ಆಕರ್ಷಣೆಗೊಳಗಾಗಿ ಇದನ್ನು ತಿಂದು ಬಿಡುತ್ತವೆ. ಈ ಹಾವು ಇಷ್ಟು ದೊಡ್ಡದಾಗಿ ಬೆಳೆದಿರುವುದು ವಿಶೇಷ ಎಂದು ಉರಗ ಪ್ರೇಮಿ ಸ್ನೇಕ್ ಕಿರಣ್ ಹೇಳಿದ್ದಾರೆ.
ಇದನ್ನೂ ಓದಿರಿ ತಂದೆ ಎದುರಲ್ಲೇ 7 ವರ್ಷದ ಬಾಲಕಿಯನ್ನು ಎಳೆದೊಯ್ದ ಚಿರತೆ…
ಸ್ನೇಕ್ ಕಿರಣ್ ಹಾವನ್ನು ರಕ್ಷಿಸಿದ್ದು, ವಲಯ ಅರಣ್ಯಾಧಿಕಾರಿ ಶ್ರೀಧರ್ ನಿರ್ದೇಶನದಂತೆ ಪಿಲಿಕುಳ ನಿಸರ್ಗಧಾಮಕ್ಕೆ ಹಸ್ತಾಂತರಿಸಲಾಯಿತು.
ಬಿಳಿ ಹಾವುಗಳು ಅಪರೂಪವಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿರುವುದು ಎರಡನೇಯದ್ದು. ಚರ್ಮದ ವರ್ಣದ್ರವ್ಯದ ಕೊರತೆಯಿಂದ ಹುಟ್ಟುವ ಈ ಜೀವಿಗಳಿಗೆ ಆಲ್ಬಿನೋ ಎಂದು ಕರೆಯುವುದಾಗಿ ಸ್ನೇಕ್ ಕಿರಣ್ ತಿಳಿಸಿದರು.