ನ್ಯೂಸ್

ರವೀಂದ್ರನಾಥ ಟ್ಯಾಗೋರ್ ಬರೆದ ಪತ್ರ 21 ಲಕ್ಷ ರೂ.ಗೆ ಹರಾಜು

ನವದೆಹಲಿ: ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರು ಬರೆದ ಅಪರೂಪದ ಪತ್ರವು ಆನ್‌ಲೈನ್ ಕಲಾ ಹರಾಜಿನಲ್ಲಿ 21 ಲಕ್ಷ ರೂ.ಗೆ ಮಾರಾಟವಾಗಿದೆ.

ಟ್ಯಾಗೋರ್ ಅವರ ಸಣ್ಣ ಕಥೆಗಳ ಇಂಗ್ಲಿಷ್ ಅನುವಾದದ ಬಗ್ಗೆ ವ್ಯಕ್ತಪಡಿಸುವ ಪತ್ರದ ಮೂಲ ಬೆಲೆಯ ಏಳು ಪಟ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಮೂಲಕವಾಗಿ ಎಲ್ಲಾ ನಿರೀಕ್ಷೆಗಳನ್ನು ಮೀರಿದೆ. ಈ ಪತ್ರವು ಆರಂಭದಲ್ಲಿ 3 ಲಕ್ಷ ರೂ.ವರೆಗೆ ಸಿಗುವ ನಿರೀಕ್ಷೆಯಿತ್ತು ಆದರೆ ಹಲವಾರು ಬಿಡ್ಡರ್‌ಗಳ ನಡುವೆ ತೀವ್ರ ಪೈಪೋಟಿಯು ಈ ಬೆಲೆಯನ್ನು ಹೆಚ್ಚಿಸಿದೆ.

1930 ಜನವರಿ 3 ರಂದು ಸತ್ಯಭೂಷಣ ಸೇನ್‌ಗೆ ಬರೆದ ಪತ್ರದಲ್ಲಿ, ಟ್ಯಾಗೋರ್ ಅವರು ತಮ್ಮ ಕಥೆಗಳನ್ನು ಇಂಗ್ಲಿಷ್ ಓದುಗರು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಬರವಣಿಗೆಯ ಶೈಲಿಯು ಆ ಕಾಲದ ಇಂಗ್ಲಿಷ್ ಬರಹಗಾರರಿಗಿಂತ ಹೆಚ್ಚು ಭಿನ್ನವಾಗಿತ್ತು. ಹಾಗೂ ಟ್ಯಾಗೋರ್​ ಅವರು ಬರೆದಿರುವ ಮೂಲ ಭಾಷೆಯಿಂದ ಬೇರೆ ಭಾಷೆಗೆ ಭಾಷಾಂತರ ಮಾಡಿದಾಗ ಅದು ಮೂಲ ಸೊಗಡನ್ನು ಕೆದುಕೊಳ್ಳುತ್ತಿತ್ತು ಎಂದು ಟ್ಯಾಗೋರ್ ಹೇಳುತ್ತಿದ್ದರು.

ಆದರೆ ಟ್ಯಾಗೋರ್ ಸಹೋದರಿ ನಿವೇದಿತಾ ಅವರ ಸಣ್ಣ ಕಥೆಗಳನ್ನು ಅನುವಾದಿಸಿದ್ದರು. ಅವುಗಳಲ್ಲಿ ಒಂದು ಟ್ಯಾಗೋರ್ ಅವರ 'ಕಾ-ಬುಲಿವಾಲಾ' ನ 1912 ರ ಅನುವಾದವಾಗಿದೆ (ಅನುವಾದದಲ್ಲಿ 'ಕಾಬುಲಿವಾ-ಲಾ' ಎಂದು ಬರೆಯಲಾಗಿದೆ). ಈ ಬರವು ಚೆನ್ನಾಗಿದೆ ಎಂದು ಬೇಡಿಕೆ ಇರುವ ಕಾರಣದಿಂದಾಗಿ ಮೂಲ ಭಾಷೆಯಿಂದ ಇಂಗ್ಲಿಷ್​ಗೆ ಮಾಡಲಾಗಿತ್ತು.

ರವೀಂದ್ರನಾಥ ಠಾಗೋರ್ ಅವರು 1912 ರಲ್ಲಿ ಲಂಡನ್​​ನಲ್ಲಿ ಪ್ರಕಟವಾದ ಗೀತಾಂಜಲಿ ಸಂಗ್ರಹಕ್ಕಾಗಿ 1913 ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.