ನ್ಯೂಸ್

ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಪಹರಣ ಕೇಸ್: ಭವಾನಿ ರೇವಣ್ಣ ಅರ್ಜಿ ತೀರ್ಪು ಕಾಯ್ದಿರಿಕೆ

ಬೆಂಗಳೂರು: ಮೈಸೂರಿನ ಕೆ.ಆರ್.ನಗರದ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿನಲ್ಲಿನ ಷರತ್ತು ಸಡಿಲಿಕೆ ಕೋರಿ ಭವಾನಿ ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಮೈಸೂರು ಮತ್ತು ಹಾಸನ ಜಿಲ್ಲೆಗೆ ತೆರಳಲು ನಿರ್ಬಂಧ ಸೇರಿ ಹಲವು ಷರತ್ತು ವಿಧಿಸಿ ನ್ಯಾಯಪೀಠ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನಿನಲ್ಲಿನ ಷರತ್ತು ಸಡಿಲಿಕೆ ಕೋರಿ ಭವಾನಿ ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ವಿಚಾರಣೆ ನಡೆಸಿತು.

ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ...

ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಪೀಠವು ಸ್ವಾತಂತ್ರ್ಯ ಧಕ್ಕಿದ ನಂತರದಲ್ಲಿ ಚುನಾಯಿತ ಪ್ರತಿನಿಧಿಗಳು ಅಪರಾಧ ಎಸಗಿದಾಗ ಅವರು ಚುನಾವಣೆಗೆ ಭಾಗಿಯಾದಂತೆ ನಿರ್ಬಂಧ ವಿಧಿಸುವ

ಕಾನೂನು ಇದ್ದರೂ ಚಾಲ್ತಿಗೆ ತರಲಾಗುತ್ತಿಲ್ಲ. ಈ ನೆಲೆಯಲ್ಲಿ ಹಲವು ಸಮಿತಿಗಳು ರಚನೆಯಾಗಿದೆ ಆದರೂ ಸಕಾರಾತ್ಮಕ ವ್ಯತ್ಯಾಸ ಕಂಡುಬಂದಿಲ್ಲ. ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ ಅದನ್ನು ಜಾರಿಗೊಳಿಸಬೇಕಾದವರು ಒಳ್ಳೆಯವರಾಗಿರದಿದ್ದರೆ ಹೇಗೆ ಎಂದು ಅಸಮಾಧಾನ ಹೊರಹಾಕಿತು.