ನ್ಯೂಸ್

ಅಮಾನತ್ತಾಗಿರೋ ಐಎಎಸ್​ ಅಧಿಕಾರಿ ಯಾವುದಕ್ಕೂ ಸ್ಪಷ್ಟ ಉತ್ತರ ಕೊಡ್ತಿಲ್ಲ..!

ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಅಕ್ರಮವಾಗಿ ಮತದಾರರ ಖಾಸಗಿ ಮಾಹಿತಿ ಸಂಗ್ರಹ ಮಾಡಿದ ಆರೋಪ ರಾಜ್ಯ ರಾಜಕೀಯದಲ್ಲೇ ಸಂಚಲನ ಸೃಷ್ಟಿಸಿದೆ. ಚಿಲುಮೆ ಸಂಸ್ಥೆಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ ಆರೋಪ ಸಂಬಂಧ ಹಲಸೂರ್ ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಅದರ ನಡುವೆ ವಿಚಾರಣೆಯಲ್ಲಿ ಐಎಎಸ್​ ಅಧಿಕಾರಿ ರಂಗಪ್ಪ ಯಾವುದಕ್ಕೂ ಸಮರ್ಪಕ ಉತ್ತರ ಕೊಡುತ್ತಿಲ್ಲ ಎನ್ನುವುದು ತಿಳಿದು ಬಂದಿದೆ.

ಅಮಾನತ್ತಾಗಿರುವ ಐಎಎಸ್ ಅಧಿಕಾರಿ ರಂಗಪ್ಪ ವಿಚಾರಣೆ ನಡೆಯುತ್ತಿದೆ. ಸುಮಾರು‌ ನಾಲ್ಕು ಗಂಟೆಗಳ ಕಾಲ ಡಿಸಿಪಿ ಶ್ರೀನಿವಾಸ್​ ಗೌಡ ವಿಚಾರಣೆ ಮಾಡಿದ್ದಾರೆ. ಆದರೆ ರಂಗಪ್ಪನಿಂದ ಪೊಲೀಸರಿಗೆ ಸರಿಯಾದ ಉತ್ತರವೇ ಸಿಗುತ್ತಿಲ್ಲ. 'ಮೇಲಿನವರು ಆದೇಶ ಮಾಡಿದ್ದು ಕೆಳಗಿನವರು ಪಾಲನೆ ಮಾಡಿದ್ದಾರೆ ಅಷ್ಟೆ' ಎಂದು ಉತ್ತರ ನೀಡುತ್ತಿದ್ದಾರೆ.

ಸದ್ಯ ರಂಗಪ್ಪನ ಅಸ್ಪಷ್ಟ ಉತ್ತರಗಳಿಂದ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಪೊಲೀಸರು 45 ಪ್ರಶ್ನೆಗಳನ್ನು ಕೇಳಿದ್ರೂ ಯಾವುದಕ್ಕೂ ಇಲ್ಲ ಸರಿಯಾದ ಉತ್ತರ ನೀಡಿಲ್ಲ. ಹೀಗಾಗಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ರಂಗಪ್ಪಗೆ ನೊಟೀಸ್ ನೀಡಲಾಗಿದೆ. ಇನ್ನು ವಿಚಾರಣೆಗೆ ಹಾಜರಾಗುವಾಗ ಮೇಲಿನ ಅಧಿಕಾರಿಗಳ ಅದೇಶ ಸಂಬಂಧ ದಾಖಲೆ ತರುವಂತೆ ಸೂಚನೆ ನೀಡಲಾಗಿದೆ.

ಇನ್ನು ಈ ಪ್ರಕರಣದಲ್ಲಿ ಬಿಬಿಎಂಪಿ ಆಯುಕ್ತರ ವಿಚಾರಣೆ ಒಂದೇ ಬಾಕಿ ಎಂದು ಹೇಳಲಾಗುತ್ತಿದೆ. ಸದ್ಯ ಅನಾರೋಗ್ಯದಿಂದ ಬಿಬಿಎಂಪಿ ಕಮಿಷನರ್​ ತುಷಾರ್ ಗಿರಿನಾಥ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುಣಮುಖ ಆದ ಬಳಿಕ ಬಿಬಿಎಂಪಿ ಕಮೀಷನರ್ ವಿಚಾರಣೆ ನಡೆಸಲಾಗುವುದು. ಶೀಘ್ರವೇ ತುಷಾರ್ ಗಿರಿನಾಥ್ ಗೆ ಪೊಲೀಸರು ನೊಟೀಸ್ ಕೊಟ್ಟು ವಿಚಾರಣೆ ಮಾಡಲಿದ್ದಾರೆ.