ರಾಣೆಬೆನ್ನೂರ: ವೇಮನರು ಜಗತ್ತು ಕಂಡ ಮಹಾಯೋಗಿ, ಅವರನ್ನು ಬ್ರಿಟಿಷ್ ಅಧಿಕಾರಿ ಸಿ.ಪಿ. ಬ್ರೌನ್ ಎಂಬುವರು ಗುರುತಿಸಿ ಮುನ್ನಲೆಗೆ ತಂದಿದ್ದರು. ದೇವರು ನಿನ್ನೊಳಗೆ ಇದ್ದಾನೆ ಎಂದು ಹೇಳಿದವರು ಮಹಾನ್ ಯೋಗಿ ವೇಮನರು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಇಲ್ಲಿಯ ಮಹಾಯೋಗಿ ವೇಮನ ವಿದ್ಯಾವರ್ಧಕ ಸಂ, ಜಿಲ್ಲಾ ರಡ್ಡಿ ಸಂದ ವತಿಯಿಂದ ಭಾನುವಾರ ನಗರದ ವೇಮನ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಮಹಾಯೋಗಿ ವೇಮನರ 613ನೇ ಜಯಂತಿ ಹಾಗೂ ವೇಮನ ಕುರಿತ ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೇಮನರು ಸ್ವೇಶ್ಚಾ ಚಾರಕ್ಕೆ ಇಳಿದಾಗ ಅವರನ್ನು ಮನುಕೂಲಕ್ಕೆ ತಂದವರು ಮಹಾ ಸಾದ್ವಿ ಹೇಮರೆಡ್ಡಿ ಮಲ್ಲಮ್ಮ. ರೆಡ್ಡಿಗಳು ಶ್ರಮಜೀವಿಗಳು ಎನ್ನುತ್ತಾರೆ. ಸಮಾಜದಲ್ಲಿ ದುಡಿದು ಬೆಳೆಬೇಕು ಎಂಬುದು ರೆಡ್ಡಿ ಸಮಾಜದವರ ಮುಖ್ಯ ಉದ್ದೇಶವಾಗಿದೆ. ಸಮಾಜದ ಪ್ರತಿಯೊಬ್ಬರೂ ಉನ್ನತ ಮಟ್ಟದಲ್ಲಿ ಉನ್ನತ ನಾಗರಿಕರಾಗಿ ಬೆಳೆಯಬೇಕು ಎಂದರು.
ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ರೆಡ್ಡಿ ಸಮಾಜದವರು ಮನಸ್ಸು ಮಾಡಿದರೆ 6 ಕೋಟಿಯನ್ನು 12 ಕೋಟಿ ಮಾಡಬಲ್ಲರು. ಹಾವೇರಿ ನಗರದಲ್ಲಿ ರೆಡ್ಡಿ ಸಮಾಜದವರಿಗೆ ಒಂದು ನಿವೇಶನ ಕೊಡಿಸಲು ಪ್ರಯತ್ನ ಮಾಡುವೆ ಎಂದರು.
ಓಂ ಸಮೂಹ ಸಂಸ್ಥೆ ಕಾರ್ಯದಶಿರ್ ಹಾಗೂ ಜಿಲ್ಲಾ ರಡ್ಡಿ ಸಂದ ಅಧ್ಯಕ್ಷ ಡಾ. ಮನೋಜ ಸಾವಕಾರ ಅಧ್ಯಕ್ಷತೆ ವಹಿಸಿದ್ದರು. ಮಹಾಯೋಗಿ ವೇಮನರ ಕುರಿತು ಹಿರೇಕೆರೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಉಪನ್ಯಾಸಕ ಡಾ. ಕಾಂತೇಶರಡ್ಡಿ ಗೋಡಿಹಾಳ ಉಪನ್ಯಾಸ ನೀಡಿದರು.
ಮಹಾಯೋಗಿ ವೇಮನ ಮತ್ತು ಸಂತ ಕನಕದಾಸರು, ವೇಮನ ಗೀತೆ ಭಾಗ-&01, ಮತ್ತು ಭಾಗ-&02, ಮಹಾಯೋಗಿ ವೇಮನ ತತ್ವ ಪ್ರಚಾರದಲ್ಲಿ ಕೆ.ಎಚ್. ಪಾಟೀಲರ ಪಾತ್ರ ಸೇರಿ ನಾಲ್ಕು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಸಮಾರಂಭಕ್ಕೂ ಮುನ್ನ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಎಂ.ಜಿ. ರಸ್ತೆ, ಬಸ್ ನಿಲ್ದಾಣದ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಮಹಾಯೋಗಿ ವೇಮನರ ಹಾಗೂ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.
ಗೋಟಗೋಡಿ ಜಾನಪದ ವಿಶ್ವ ವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಬಾಸ್ಕರ್, ಓಂ ಸಮೂಹ ಸಂಸ್ಥೆ ಅಧ್ಯೆ ರುಕ್ಮಿನಿ ಸಾವಕಾರ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಎಂ.ಎಂ. ಮೈದೂರ, ಸಂದ ಪ್ರಮುಖರಾದ ಮಂಜುನಾಥ ಅಜರೆಡ್ಡಿ, ಪ್ರಶಾಂತರೆಡ್ಡಿ ಎರೇಕುಪ್ಪಿ, ಸಂಜೀವರೆಡ್ಡಿ ಮಧುಗುನಿ, ಪ್ರಭಾಕರ ಮೈದೂರ ಮತ್ತಿತರರು ಉಪಸ್ಥಿತರಿದ್ದರು.