ನ್ಯೂಸ್

ಗಮನ ಸೆಳೆದ ವಿದ್ಯಾಥಿರ್ಗಳ ತಿರಂಗಾ ರ್ಯಾಲಿ

ರಾಣೆಬೆನ್ನೂರ: 78ನೇ ಸ್ವಾತಂತ್ರೊ$್ಯತ್ಸವ ನಿಮಿತ್ತ ತಾಲೂಕು ಆಡಳಿತ, ನಗರಸಭೆ ವತಿಯಿಂದ ಮಂಗಳವಾರ ನಗರದಲ್ಲಿ ತಿರಂಗಾ ರ್ಯಾಲಿ ನಡೆಸಲಾಯಿತು.
ಸಿದ್ದೇಶ್ವರ ನಗರದ ತಹಸೀಲ್ದಾರ್​ ಕಚೇರಿಯಿಂದ ಆರಂಭಗೊಂಡ ತಿರಂಗಾ ರ್ಯಾಲಿ ಹಳೆ ಪಿ.ಬಿ. ರಸ್ತೆ ಮೂಲಕ ಕುರುಬಗೇರಿ ಕ್ರಾಸ್​, ಹಲಗೇರಿ ಕ್ರಾಸ್​ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸ್​ ನಿಲ್ದಾಣ ವೃತ್ತಕ್ಕೆ ಬಂದು ಕೊನೆಗೊಂಡಿತು.
ತಹಸೀಲ್ದಾರ್​ ಆರ್​.ಎಚ್​. ಭಗವಾನ್​ ರ್ಯಾಲಿಗೆ ಚಾಲನೆ ನೀಡಿದರು.
ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ, ಬಿಇಒ ಶ್ಯಾಮಸುಂದರ ಅಡಿಗಾರ, ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ, ಅಶೋಕ ಅರಳೇಶ್ವರ, ಬಸವರಾಜ ಶಿಡೇನೂರ, ವಸಂತ ಪೂಜಾರ, ಮಾಲತೇಶ ದ್ಯಾಮಣ್ಣನವರ, ಸರ್ಕಾರಿ ಪಿಯು ಕಾಲೇಜ್​ನ, ಎನ್​ಸಿಸಿ ತಂಡ, ಎನ್​ಎಸ್​ಎಸ್​ ತಂಡ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.