oplus_2 
ನ್ಯೂಸ್

ಗಾರ್ನಿಯರ್ ಹೇರ್ ಕಲರಿಂಗ್ ಮಾಡಿಸಿಕೊಂಡು ಸಂಭ್ರಮಿಸಿದ ಜನತೆ

ರಾಣೆಬೆನ್ನೂರ: ನಗರದಲ್ಲಿ ರಾಜ್ಯದ ನಂ. ೧ ಕನ್ನಡ ದಿನ ಪತ್ರಿಕೆ `ವಿಜಯವಾಣಿ' ಬುಧವಾರದಿಂದ ಆರಂಭಿಸಿರುವ ಉಚಿತ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನಕ್ಕೆ ಸ್ಥಳೀಯ ಜನರಿಂದ ಭಾರಿ ಬೆಂಬಲ ದೊರೆದಿದ್ದು, ಒಂದೇ ದಿನದಲ್ಲಿ ೨೦೦ಕ್ಕೂ ಅಽಕ ಜನರು ಹೇರ್ ಕಲರಿಂಗ್ ಮಾಡಿಸಿಕೊಂಡರು.

ನಗರದ ಕೆಎಲ್‌ಇ ಸಂಸ್ಥೆಯ ರಾಜ ರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಭಿಯಾನಕ್ಕೆ ರೋಟರಿ ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಸಂಜನಾ ಕುರುವತಿ ಚಾಲನೆ ನೀಡಿದರು. ನಂತರ ಯುವಕರು, ಯುವತಿಯರು, ಪುರುಷರು ಹಾಗೂ ಮಹಿಳೆಯರು ಬಂದು ತಮಗಿಷ್ಟವಾದ ಹೇರ್ ಕಲರ್ ಹಚ್ಚಿಸಿಕೊಂಡರು. ಹೇರ್ ಕಟಿಂಗ್ ಅಂಗಡಿಗಳ ಮಾಲೀಕರು, ಬ್ಯೂಟಿ ಪಾರ್ಲರ್‌ಗಳ ಮಾಲೀಕರು ಬಂದು ಹೇರ್ ಕಲರಿಂಗ್ ಮಾಡುವುದನ್ನು ಕೂತುಹಲದಿಂದ ವಿಕ್ಷೀಸಿದರು.

ಅಭಿಯಾನ ಆರಂಭವಾದ ಬೆಳಗಿನಿಂದ ಹಿಡಿದು ಸಂಜೆಯವರೆಗೂ ಜನರು ಬಂದು ಕಪು÷್ಪ, ಕೆಂಪು, ಕಡುಗಪು÷್ಪ ಸೇರಿ ಇತರ ಬಣ್ಣಗಳನ್ನು ಹಚ್ಚಿಸಿಕೊಂಡು ಸೆಲಿ ಬೋರ್ಡ್ ಹತ್ತಿರ ನಿಂತು ಫೋಟೊ ತೆಗೆಯಿಸಿಕೊಂಡು ಸಂಭ್ರಮಿಸಿದರು.

ಕೆಎಲ್‌ಇ ಸಂಸ್ಥೆಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸುಧಾ ಕೋಟಿಹಾಳ, ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ, ರಾಣೆಬೆನ್ನೂರ ಗೋ ಗ್ರೀನ್ ಸಂಚಾಲಕ ಡಾ. ಗಿರೀಶ ಕೆಂಚಪ್ಪನವರ, ದೇವರಾಜ ಹರನಗಿರಿ, ಪ್ರಮೀಳಾ ಜಂಬಗಿ ಮತ್ತಿತರರು ಉಪಸ್ಥಿತರಿದ್ದರು.

ಇಂದೂ ನಡೆಯಲಿದೆ ಅಭಿಯಾನ... ರಾಣೆಬೆನ್ನೂರ ನಗರದ ಹಳೆ ಪಿ.ಬಿ. ರಸ್ತೆಯ ಕೆಎಲ್‌ಇ ಸಂಸ್ಥೆಯ ರಾಜ ರಾಜೇಶ್ವರಿ ಮಹಾವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆ. ೮ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಉಚಿತವಾಗಿ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ಜರುಗಲಿದೆ. ಗಾರ್ನಿಯರ್ ಕಂಪನಿಯ ಸಿಬ್ಬಂದಿ ಪುರುಷರು ಹಾಗೂ ಮಹಿಳೆಯರ ಕೂದಲಿಗೆ ಉಚಿತವಾಗಿ ಬಣ್ಣ ಹಚ್ಚಲಿದ್ದಾರೆ. ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕೋರಲಾಗಿದೆ.