ರಾಣೆಬೆನ್ನೂರ: ನಗರದ 220 ಕೆವಿ ವಿದ್ಯುತ್ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ ಜು. 29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ತಾಲೂಕಿನ ನಾಗೇನಹಳ್ಳಿ, ಹೊಳೆಆನ್ವೇರಿ, ಮಲಕನಹಳ್ಳಿ, ಮುದೇನೂರು, ಹನುಮನಹಳ್ಳಿ, ತೆರೆದಹಳ್ಳಿ, ಕೃಷ್ಣಾಪುರ, ಮುಷ್ಟೂರು, ಇಟಗಿ ಸುತ್ತಲಿನ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.