ನ್ಯೂಸ್

ರಾಣೆಬೆನ್ನೂರಿನಲ್ಲಿ ವಿದ್ಯುತ್​ ವ್ಯತ್ಯಯ  7ರಂದು

ರಾಣೆಬೆನ್ನೂರ: ತುರ್ತು ವಿದ್ಯುತ್​ ಕಾಮಗಾರಿ ನಿಮಿತ್ತ ೆ. 7ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಇಲ್ಲಿಯ ಬೀರೇಶ್ವರ ನಗರ, ವಿದ್ಯಾನಗರ, ಗೌರಿಶಂಕರ ನಗರ, ಪಿ.ಬಿ. ರಸ್ತೆ, ಹುಣಸಿಕಟ್ಟಿ ರಸ್ತೆ, ವಾಗೀಶ ನಗರ, ಮೆಡ್ಲೇರಿ ರಸ್ತೆ, ಚೌಡೇಶ್ವರಿ ನಗರ, ಪಂಪಾನಗರ, ವಿನಾಯಕ ನಗರ, ರಾಜೇಶ್ವರಿ ನಗರ, ಶಬರಿ ನಗರ ಸೇರಿ ಸುತ್ತಲಿನ ಪ್ರದೇಶಗಳಿಗೆ ವಿದ್ಯುತ್​ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.