ನ್ಯೂಸ್

ಶ್ರೀನಿವಾಸ ಕಲ್ಯಾಣೋತ್ಸವ ಮೇ 17, 18ರಂದು

ರಾಣೆಬೆನ್ನೂರ: ನಗರದ ಮೇಡ್ಲೇರಿ ರಸ್ತೆ ವಾಗೀಶ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮೇ 17, 18ರಂದು ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಮೇ 17ರಂದು ಸಂಜೆ 7.30ಕ್ಕೆ ವರಪೂಜೆ, ಮೇ 18ರಂದು ಬೆಳಗ್ಗೆ 8ಕ್ಕೆ ಸುರಗಿ, 8.30ಕ್ಕೆ ಪುಣ್ಯಾಹ, ನಾಂದಿ, ಮಾಂಗಲ್ಯಧಾರಣ, 10.35ಕ್ಕೆ ಅಕ್ಷತಾರೋಪಣ, ಕನ್ಯಾದಾನ, ರಾಜಹೋಮ, ಸಪ್ತಪದಿ, 11.30ಕ್ಕೆ ವಧುವರರ ಮೆರವಣಿಗೆ, 12.30ಕ್ಕೆ ಮಹಾಪ್ರಸಾದ, ಸಂಜೆ 5.30ಕ್ಕೆ ಪದ್ಮಾವತಿದೇವಿ ಹಾಗೂ ಶ್ರೀನಿವಾಸ ದೇವರ ಕಲ್ಯಾಣ ಮಹೋತ್ಸವ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.