ರಾಣೆಬೆನ್ನೂರ: ನಗರದ ಶನೇಶ್ಚರ ಮಂದಿರದಲ್ಲಿ ದ್ವಾದಶ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ನ. 15ರಿಂದ 30 ರವರಗೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ, ವಿಶ್ವಶಾಂತಿ ಹಾಗೂ ಪ್ರಾಚಿನ ಧರ್ಮ-ಪರಂಪರೆಯ ಸಂವರ್ಧನೆಗಾಗಿ ಅತಿರುದ್ರ ಮಹಾಯಾಗ, ಲಕ್ಷದಿಪೋತ್ಸವ, ಮನಕುಲ ಸದ್ಬಾವನ ಸಮಾರಂಭ ಜರುಗಲಿದೆ ಎಂದು ಮಂದಿರದ ಶಿವಯೋಗಿ ಶಿವಾಚಾರ್ಯರು ತಿಳಿಸಿದ್ದಾರೆ.
ನಿತ್ಯವೂ ನಸುಕಿನ ಜಾವ 3.30ರಿಂದ ಮಹಾಸಂಕಲ್ಪ, 4.05ರಿಂದ ಶ್ರೀ ದುರ್ಗಾ ಸಪ್ತಶತಿ ಪಾರಾಯಣ, ಬೆಳಗ್ಗೆ 6.45ರಿಂದ ಶ್ರೀ ದುರ್ಗಾ ಮೂತಿರ್ಗೆ ಮಹಾರುದ್ರಾಭಿಷೇಕ, 8.30ರಿಂದ ನವಾಕ್ಷರಿ ಮಂತ್ರ ಹೋಮ, 9.45ರಿಂದ ಶ್ರೀ ರುದ್ರಹೋಮ, 11.30ರಿಂದ ಶ್ರೀದೇವಿಗೆ ಮಹಾಆರತಿ, ಮಧ್ಯಾಹ್ನ 2.30ರಿಂದ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಪಾರಾಯಣ, ಮಧ್ಯಾಹ್ನ 3.30ರಿಂದ ಶ್ರೀ ಚಕ್ರಕ್ಕೆ ಲಲಿತಾ ಸಹಸ್ರ ನಾಮಾವಳಿ ಸಹಿತ 12 ಕೋಟಿ ಕುಂಕುಮಾರ್ಚನೆ ನಡೆಯಲಿದೆ.
ನ. 27ರಂದು ಅತಿರುದ್ರ ಮಹಾಯಾಗದ ಪೂರ್ಣಾಹುತಿ, ಮಹಾಮಂಗಳಾರತಿ, ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನದ ಮಂಗಲೋತ್ಸವ, ನ. 28ರಂದು ಬೆಳಗ್ಗೆ 8ರಿಂದ ಶ್ರೀ ವೀರಭದ್ರಸ್ವಾಮಿ ಗುಗ್ಗಳ ಮಹೋತ್ಸವ, ಮಧ್ಯಾಹ್ನ 3ರಿಂದ ವೀರಶೈವ ಸಂಸತಿ ವೈಭವ ಸಮಾರಂಭ, ಗೋಧೂಳಿ ಮುಹೂರ್ತದಲ್ಲಿ ಶ್ರೀ ಭದ್ರಕಾಳಿ ಸಮೇತ ವೀರಭದ್ರಸ್ವಾಮಿ ಕಲ್ಯಾಣ ಮಹೋತ್ಸವ, ನ. 29ರಂದು ಮಧ್ಯಾಹ್ನ 3ಕ್ಕೆ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಪಾರಾಯಣ ಹಾಗೂ ಮಾತೃಸಂಗಮ ಮಾತೃದೀಪ್ತಿ ಪ್ರಶಸ್ತಿ ಪ್ರದಾನ, ನ. 30ರಂದು ಬೆಳಗ್ಗೆ 8ರಿಂದ ಶ್ರೀ ಶನೈಶ್ಚರ ಸ್ವಾಮಿಗೆ ಸಹಸ್ರ ಕಲಶಾಭಿಷೇಕ, ಮಧ್ಯಾಹ್ನ 3ರಿಂದ ಮನುಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಮನುಕುಲ ಸದ್ಭಾವನಾ ಬೆಳಕಿನ ಧರ್ಮ ಸಮಾರಂಭ ಹಾಗೂ ಸಂಜೆ 7.30ಕ್ಕೆ ಲಕ್ಷ ದೀಪೋತ್ಸವ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.