ರಾಣೆಬೆನ್ನೂರ: ಮಧ್ವ ಸಂಘದ ವತಿಯಿಂದ ಗುರುವಾರ ಮಧ್ವ ಜಯಂತಿ ಅಂಗವಾಗಿ ಮಧ್ವಾಚಾರ್ಯರ ಭಾವಚಿತ್ರ ಮೆರವಣಿಗೆ ನಗರದಲ್ಲಿ ಸಂಭ್ರಮ ಸಡಗರದಿಂದ ಜರುಗಿತು. ಪ್ರಮುಖರಾದ ಭೀಮಸೇನ ಚಿಮ್ಮಲಗಿ, ಮಧ್ವಾಚಾರ್ಯ ಚಂಡಿ, ಅನಂತ ಚಂಡಿ, ಅಶೋಕ ನಾಡಿಗೇರ, ತುಳಸಿ ಮತ್ತಿತರರು ಪಾಲ್ಗೊಂಡಿದ್ದರು.