ರಾಣೆಬೆನ್ನೂರ: ನಗರದ ಗಂಗಾಪುರ ರಸ್ತೆಯ ಗುರು ಕೊಟ್ಟೂರೇಶ್ವರ ಮಠದಲ್ಲಿ ಡಿ. 1ರಂದು ಶ್ರೀ ದಾನಮ್ಮ ದೇವಿಯ 9ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಕಾತಿರ್ಕೋತ್ಸವವು ಜರುಗಲಿದೆ.
ಅಂದು ಬೆಳಗ್ಗೆ 5.30ಕ್ಕೆ ಶ್ರೀ ದಾನಮ್ಮ ದೇವಿಗೆ ರುದ್ರಾಭಿಷೇಕ, ಅಷ್ಟೋತ್ತರ ಮತ್ತು ಮಹಾ ಮಂಗಳಾರತಿ ಜರುಗುವುದು. 10 ಗಂಟೆಗೆ ಉಡಿ ತುಂಬುವುದು, ಪ್ರಸಾದ ವಿತರಣೆ ಮಾಡಲಾಗುವುದು. ಸಂಜೆ 5 ಗಂಟೆಗೆ ಶ್ರೀ ದಾನಮ್ಮದೇವಿಯ ಪಲ್ಲಕ್ಕಿ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠ ತಲುಪುವುದು. ರಾತ್ರಿ 7.30 ಗಂಟೆಗೆ ತಾಲೂಕಿನ ಗುಡ್ಡದ ಆನ್ವೇರಿಯ ಶಿವಯೋಗಿಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾತಿರ್ಕೋತ್ಸವ ಜರುಗುವುದು ಎಂದು ಸಮಿತಿ ಪ್ರಕಟಣೆ ತಿಳಿಸಿದೆ.