ರಾಣೆಬೆನ್ನೂರ: ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಸಮಾಜದ ಹಿತಕ್ಕಾಗಿ ಶಿಕ್ಷಣ ಸಂಸ್ಥೆ ಕಟ್ಟಿದ ಸಪ್ತಷಿರ್ಗಳ ಕಾರ್ಯ ಶ್ಲಾನೀಯ ಎಂದು ಕೆಎಲ್ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ವಿ.ಪಿ. ಲಿಂಗನಗೌಡ್ರ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ರಾಜ ರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ 109ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕಿ ಕವಿತಾ ಗಡ್ಡದಗೂಳಿ ಉಪನ್ಯಾಸ ನೀಡಿದರು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ವೀರಣ್ಣ ಅಂಗಡಿ, ಜಯಣ್ಣ ಜಂಬಿಗಿ, ಉಪನ್ಯಾಸಕರಾದ ಐಶ್ವರ್ಯ ಶೆಟ್ಟರ, ಸುರೇಖಾ ಕಟ್ಟಿ, ಪ್ರಲ್ಲಾದ ಪಿ., ಜಿ.ಎಸ್. ಚಂದ್ರಶೇಖರ, ಸುಧಾ ಕೋಟಿಹಾಳ, ವಿದ್ಯಾಶ್ರೀ ದಾಮೋದರ, ನಾರಾಯಣ ನಾಯಕ, ರೇಖಾ ಶಿಡೇನೂರ ಹಾಗೂ ಸಿಬ್ಬಂದಿ ಇದ್ದರು.