ರಾಣೆಬೆನ್ನೂರ: ಹುಬ್ಬಳ್ಳಿಯ ಅಪ್ಲೇರ್ ಸ್ಪೊರ್ಟ್ಸ ಅಕಾಡೆಮಿ ಗೋಜೋರಿಯೋ ಕಾರಾಟೆ ಡು ಸುಕಾರ ಕಾಯ್ ಇಂಡಿಯಾ ನೇತೃತ್ವದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 1ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ನಗರದ ವಿಜಯ ಅಗಡಿ ಮಾರ್ಷಲ್ ಆರ್ಟ್ಸ್ ಕ್ಲಬ್ನ ಕರಾಟೆ ಪಟುಗಳು ವಿವಿಧ ವಿಭಾಗದಲ್ಲಿ ಸ್ಪಧಿರ್ಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಬಾಲಕ ಮತ್ತು ಬಾಲಕಿಯರ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಸ್ಪಧಿರ್ಸಿ ಒಟ್ಟಾರೆಯಾಗಿ ಚಿನ್ನ 16, ಬೆಳ್ಳಿ 12 ಮತ್ತು 9 ಕಂಚಿನ ಪದಕಗಳನ್ನು ಪಡೆದು ಟೀಮ್ ಚಾಂಪಿಯನ್ಶಿಪ್ ಟ್ರೋಫಿ ಗೆದ್ದಿದ್ದಾರೆ.
ಪ್ರಥಮ ವಿಭಾಗದಲ್ಲಿ ಕರಾಟೆ ಪಟುಗಳಾದ ಸಾನ್ವಿತ್ ಎಂ.ಕೆ., ವಿಜಯ ಎಂ.ಕೆ., ಸನ್ನಿದಿ, ಮಾಹುಲ್ ಬಿ.ಎನ್., ವಿಕ್ಕಿ ಮಾಲೆ, ಭವಿತ್ ರೆಡ್ಡಿ, ಭುವನ ಡಬ್ಲೂ, ಭರತ ಕೆ., ಶರದಿ ನಾಯಕ, ಸಂಜೀವಕುಮಾರ ಬನ್ನಿಕೋಡ, ಝಮೀನ್ ಗೌಸ್ ಜಯಗಳಿಸಿದ್ದಾರೆ ಎಂದು ಕ್ಲಬ್ನ ತರಬೇತಿದಾರ ವಿಜಯ ಅಂಗಡಿ ತಿಳಿಸಿದ್ದಾರೆ.