ರಾಣೆಬೆನ್ನೂರ: ಸಮಾಜಮುಖಿ ಕಾರ್ಯಗಳಲ್ಲಿ ಸಂಘ ಸಂಸ್ಥೆಗಳ ಹೆಚ್ಚಾಗಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಜೇಸಿಐ ವಲಯ ಉಪಾಧ್ಯಕ್ಷ ಮಧುಸೂದನ ನವಡ ಹೇಳಿದರು.
ನಗರದ ದೈವಜ್ಞ ಸಮುದಾಯ ಭವನದಲ್ಲಿ ಬುಧವಾರ ರಾತ್ರಿ ಜೇಸಿಐ (ಜ್ಯೂನಿಯರ್ ಚೇಂಬರ್ ಇಂಟರ್ನ್ಯಾಶನಲ್) ಘಟಕದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜೀವ ನಮ್ಮ ಮಾತು ಕೇಳುವುದಿಲ್ಲ, ಜೀವನ ನಮ್ಮ ಮಾತು ಕೇಳುತ್ತದೆ. ಈ ನಿಟ್ಟಿನಲ್ಲಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಲು ಜೆಸಿಐ ಸಂಸ್ಥೆ ದಾರಿದೀಪವಾಗಿದೆ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳು ಮಾಡಬೇಕು ಎಂದರು.
ಜೇಸಿಐ ವಲಯಾಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ವಲಯ- 24ರ ಅಧ್ಯಕ್ಷ ಗೌರೀಶ ಭಾರ್ಗವ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ನೂತನ ಅಧ್ಯಕ್ಷ ಕುಮಾರ ಬೆಣ್ಣಿ, ಉಪಾಧ್ಯಕ್ಷ ಅಶೋಕ ದುರ್ಗದಶೀಮಿ, ಚಂದನ ಹಿತ್ತಲಮನಿ, ವಿನಾಯಕ ಕಾಕಿ, ಸಾಯಿನಾಥ ಗೋಂದಕರ, ಆಕರ್ಶ ಬಸ್ಮಾಂಗಿಮಠ, ವಿನಾಯಕ ಗುಲಗಂಜಿ, ರೇಖಾ ಬೆಣ್ಣಿ, ಕಾರ್ಯದಶಿರ್ ಇಮ್ರಾನ್ ನೀಲಗಾರ, ಸಹ ಕಾರ್ಯದಶಿರ್ ವಿನಾಯಕ ಯಕನಹಳಿ, ಖಜಾಂಚಿ ವಿದ್ಯಾದರ ಹಲಗೇರಿ ಹಾಗೂ ಇತರ ಸದಸ್ಯರು ಅಧಿಕಾರ ಸ್ವೀಕರಿಸಿದರು.
ಸಂಸ್ಥೆಯ ಪೂರ್ವಾಧ್ಯಕ್ಷ ಶ್ರೀನಿವಾಸ ಕಾಕಿ, ಲಕ್ಷಿ$್ಮ ಅಡಕಿ, ವಿ.ಎಸ್. ಹಿರೇಮಠ, ವೆಂಕಟೇಶ ಕಾಕಿ, ಪ್ರಕಾಶ ಗಚ್ಚಿನಮಠ, ಆರ್.ವಿ.ಪಾಟೀಲ, ಗಣೇಶ ದೇವಗಿರಿಮಠ, ಪ್ರಮುಖರಾದ ಭೋಜರಾಜ ಗುಲಗಂಜಿ, ಲಕ್ಷಿ$್ಮ ಶಿವಶಂಕರ, ರೂಪಾ ಕಾಕಿ, ಲಕ್ಷಿ$್ಮ ಎಸ್, ಸಿದ್ದಪ್ಪ ಅತಡಕರ, ಕೋಟ್ರೇಶಪ್ಪ ಎಮ್ಮಿ, ಶಿವಪ್ಪ ಗುರಿಕಾರ, ಸಂಜೀವ ಶಿರಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.