ನ್ಯೂಸ್

ಅಕ್ರಮ ಚಟುವಟಿಕೆಗಳನ್ನು ತಡೆಯಲು ಒತ್ತಾಯ

ರಾಣೆಬೆನ್ನೂರ: ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಪೊಲೀಸ್​ ಇಲಾಖೆಯ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ವಿವಿಧ ಮಹಿಳಾ ಸಂಟನೆಗಳ ವತಿಯಿಂದ ಸೋಮವಾರ ಸ್ಥಳಿಯ ಶಾಸಕರ ಆಪ್ತ ಸಹಾಯಕ ಶ್ರೀನಿವಾಸ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನಾದ್ಯಂತ ಕಳೆದ ಹಲವು ತಿಂಗಳುಗಳಿಂದ ಬಹಳಷ್ಟು ಕಡೆ ಅನಧಿಕೃತವಾಗಿ ಮಟ್ಕಾ, ಇಸ್ಪೀಟ್​, ವೇಶ್ಯಾವಾಟಿಕೆ, ಅಕ್ರಮ ಮರಳು ಗಣಿಗಾರಿಕೆ ದಂಧೆಗಳು ನಡೆಯುತ್ತಿವೆ. ವಿವಿಧ ಅಂಗಡಿಗಳಲ್ಲಿ ಮತ್ತು ಕೆಲವರ ಮನೆಗಳಲ್ಲಿ ಅಕ್ರಮ ಮಧ್ಯ ಮಾರಾಟದ ದಂಧೆ ನಡೆದಿದೆ.

ಇದರಿಂದ ಬಡ ಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಅಕ್ರಮ ಚಟುವಟಿಕೆ ತಡೆಯಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಕುಮಾರಸ್ವಾಮಿ ಪಾಟೀಲ, ಮಂಜುನಾಥ ಸಾಂಬೋಜಿ, ಲಲಿತಮ್ಮ ಹರನಗಿರಿ, ಲಲಿತಮ್ಮ ಲಮಾಣಿ, ಾತಿಮಾ ಲೆ$್ಮಶ್ವರ, ಪರವಿನಭಾನು ಕೋಲಕಾರ ಮತ್ತಿತರರು ಉಪಸ್ಥಿತರಿದ್ದರು.