ನ್ಯೂಸ್

ಶಾಲಾ ಮಕ್ಕಳು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ; ಶ್ಯಾಮಸುಂದರ

ರಾಣೆಬೆನ್ನೂರ: ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದು ಮಕ್ಕಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹೇಳಿದರು.

ನಗರದ ಸರ್ಕಾರಿ ಮಾದರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಂ.7ರಲ್ಲಿ ಏರ್ಪಡಿಸಿದ್ದ ಶಾಲಾ ಪ್ರಾರಂಭೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಪ್ರಾರಂಭೋತ್ಸವ ನಿಮಿತ್ತ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.

ಕ್ಷೇತ್ರ ಸಮನ್ವಯ ಅಧಿಕಾರಿ ಮಂಜು ನಾಯಕ, ಸವಿತಾ ಹಾದಿಮನಿ, ನಸ್ರಿನ್​ಬಾನು, ಬಸವರಾಜ ಕುಸನೂರ, ಎಸ್​ಡಿಎಂಸಿ ಅಧ್ಯಕ್ಷ ಅಶೋಕ ಫಾಸಿಗಾರ, ಮುಖ್ಯಶಿಕ್ಷಕ ಜಿ.ಜಿ. ಗವೇನವರ, ಮಂಜುಳಾ ಚಕ್ರಸಾಲಿ, ಬಿ. ಶೋಭಾ, ವೈ.ಎಸ್​. ಪಾಟೀಲ, ಆರ್​. ಬಸಮ್ಮ, ಜಿ.ಎಚ್​. ಮಳಗಿಮನಿ, ಸುಮಂಗಲ ರೆಡ್ಡೇರ ಮತ್ತಿತರರು ಉಪಸ್ಥಿತರಿದ್ದರು.