ರಾಣೆಬೆನ್ನೂರ: ಪಠ್ಯದಿಂದ ವಿದ್ಯಾಥಿರ್ಗಳಿಗೆ ಜ್ಞಾನ ಜಾಗತಿಕ ಲಭಿಸಿದರೆ, ಸಹ ಪಠ್ಯದಿಂದ ಸಾಮಾಜಿಕ ಜೀವನಾನುಭವ ಲಭಿಸುತ್ತದೆ ಎಂದು ಇನ್ಸ್ಐಟ್ಸ್ ಐಎಎಸ್ನ ಸಂಸ್ಥಾಪಕ ಜಿ.ಬಿ. ವಿನಯಕುಮಾರ ಹೇಳಿದರು.
ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ 2024&25ನೇ ಸಾಲಿನ ಪ್ರಥಮ ವರ್ಷದ ವಿದ್ಯಾಥಿರ್ಗಳ ಸ್ವಾಗತ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಥಿರ್ಗಳು ಸಾಂಸತಿಕ , ಸಾಹಿತ್ಯಕ ಮತ್ತು ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಯಾವುದೇ ಕೀಳರಿಮೆ ಮತ್ತು ಹಿಂಜರಿಕೆಯ ಮನೋಭಾವ ಇದ್ದರೆ ಅದನ್ನು ತೊರೆದು ಆತ್ಮವಿಶ್ವಾಸದಿಂದ ಸ್ಪಧಿರ್ಸಿ ತಮ್ಮ ಪ್ರತಿಭೆ ಪ್ರದಶಿರ್ಸಬೇಕು. ಸೋಲು-&ಗೆಲುವು ಬದಿಗಿಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭಾ ಪ್ರದರ್ಶನ ಮಾಡಬೇಕು ಎಂದರು.
ಪ್ರಾಚಾರ್ಯ ಡಾ. ಶಿವಕುಮಾರ ಬಿ. ಅಧ್ಯಕ್ಷತೆ ವಹಿಸಿದ್ದರು.
ಅಕಾಡೆಮಿಕ್ ಡೀನ್ ಡಾ. ಎಸ್.ಎಫ್. ಕೊಡದ, ಡಾ. ಎಸ್.ಜಿ. ಮಾಕನೂರ, ಡಾ. ಬಿ. ಮಹೇಶ್ವರಪ್ಪ, ಡಾ. ದಿನೇಶ ಮಾಗನೂರ, ಡಾ. ಮುಜಿಬುಲ್ಲಾ ಖಾನ ಗುತ್ತಲ, ಡಾ. ಡಿ.ಎಸ್. ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.
ಡಾ. ಎಂ.ಈ. ಶಿವಕುಮಾರ ಹೊನ್ನಾಳಿ ಸ್ವಾಗತಿಸಿದರು. ಭಾವನಾ ಪಾಟೀಲ ನಿರೂಪಿಸಿದರು. ಸಿ.ಎಂ. ಪರಮೇಶ್ವರಪ್ಪ ವಂದಿಸಿದರು.