ನ್ಯೂಸ್

ಅಂಧ ಮಕ್ಕಳಿಗೆ ಊಟ ಬಡಿಸಿ ಕೋರೆಯವರ ಜನ್ಮದಿನ ಆಚರಣೆ


ರಾಣೆಬೆನ್ನೂರ: ಕೆಎಲ್​ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ ಜನ್ಮದಿನದ ನಿಮಿತ್ತ ರಾಣೆಬೆನ್ನೂರ ಡಾ. ಪ್ರಭಾಕರ ಕೋರೆ ಕೋ&ಅಪ್​ ಕ್ರೆಡಿಟ್​ ಸೊಸೈಟಿ ವತಿಯಿಂದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆ ಮಕ್ಕಳಿಗೆ ಅನ್ನಸಂತರ್ಪಣೆ ಏರ್ಪಡಿಸುವ ಮೂಲಕ ಆಚರಿಸಲಾಯಿತು.
ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್​ ವಿ.ಪಿ. ಲಿಂಗನಗೌಡ್ರ, ಉಮೇಶ ಗುಂಡಗಟ್ಟಿ, ಚಂದ್ರಶೇಖರ ತಿಳವಳ್ಳಿ, ಉಮಾಪತಿ ಹೊನ್ನಾಳಿ, ವೀರಣ್ಣ ಅಂಗಡಿ, ಜಿ.ಜಿ. ಹೊಟ್ಟಿಗೌಡ್ರ ಹಾಗೂ ಸಿಬ್ಬಂದಿ ಇದ್ದರು.