oplus_2 
ನ್ಯೂಸ್

1.74 ಕೋಟಿ ರೂ. ಉಳಿತಾಯ ಬಜೆಟ್​ ಮಂಡನೆ

ರಾಣೆಬೆನ್ನೂರ: ಅಂತ್ಯಸಂಸ್ಕಾರಕ್ಕೆ ಶವ ಸಾಗಿಸಲು ಉಚಿತ ವಾಹನ ವ್ಯವಸ್ಥೆಗೆ 20 ಲಕ್ಷ ರೂ., ಸ್ಮಶಾನಗಳ ಅಭಿವೃದ್ಧಿಗೆ 50 ಲಕ್ಷ ರೂ., ನಗರದ ಪ್ರಮುಖ ಸ್ಥಳಗಳಲ್ಲಿ ಬಸ್​ ನಿಲ್ದಾಣ ನಿರ್ಮಾಣಕ್ಕೆ 15 ಲಕ್ಷ ರೂ., ಪ್ರಮುಖ ವೃತ್ತಗಳ ಅಭಿವೃದ್ಧಿಗೆ 50 ಲಕ್ಷ ರೂ., ಸಿಎ ಸೈಟುಗಳ ಭದ್ರತೆಗೆ 20 ಲಕ್ಷ ರೂ., ಉದ್ಯಾನಗಳ ಅಭಿವೃದ್ಧಿಗೆ 3 ಕೋಟಿ ರೂ. ಮೀಸಲು...!

ಇವು ಇಲ್ಲಿಯ ನಗರಸಭೆ ಸರ್​.ಎಂ. ವಿಶ್ವೇಶ್ವರಯ್ಯ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯೆ ಚಂಪಕ್ಕ ಬಿಸಲಹಳ್ಳಿ ಮಂಡಿಸಿದ 2025&26ನೇ ಸಾಲಿನ ಬಜೆಟ್​ನ ಪ್ರಮುಖ ಅಂಶಗಳು.

ಯಾವುದಕ್ಕೆ ಎಷ್ಟು ಅನುದಾನ ಮೀಸಲು...

ಸ್ಮಶಾನಗಳ ಅಭಿವೃದ್ಧಿಗೆ 50 ಲಕ್ಷ ರೂ. ಹಾಗೂ ನಗರಸಭೆಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಮುಕ್ತಿವಾಹನ ಖರೀದಿಸಲು 20 ಲಕ್ಷ ರೂ. ಮೀಸಲಿಡಲಾಗಿದ್ದು, ಇದರಿಂದ ಖಾಸಗಿ ವಾಹನದಲ್ಲಿ ಶವ ಸಾಗಿಸುವ ಪರಿಪಾಠ ತಪ್ಪಲಿದೆ. ಮುನ್ಸಿಪಲ್​ ಹೈಸ್ಕೂಲ್​ ಅಭಿವೃದ್ಧಿಗೆ 30 ಲಕ್ಷ ರೂ. ಮೀಸಲಿಡಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಬಸ್​ ನಿಲ್ದಾಣ ನಿಮಿರ್ಸಲು 15 ಲಕ್ಷ ರೂ. ಮೀಸಲಿಡಲಾಗಿದೆ. ಇದರ ಜತೆಗೆ ಸಾರ್ವಜನಿಕ ಶೌಚಗೃಹ ನಿರ್ಮಾಣ ಮತ್ತು ದುರಸ್ತಿಗಾಗಿ 20 ಲಕ್ಷ ರೂ. ಮೀಸಲಿಡಲಾಗಿದೆ. ನಗರಸಭೆಯ ಗುಡ್ಡದ ಸ್ಮಾರಕಭವನ ಅಭಿವೃದ್ಧಿಗಾಗಿ 10 ರೂ., ರಾಜಕಾಲುವೆಗಳ ಅಭಿವೃದ್ಧಿಗಾಗಿ 75 ರೂ. ಲಕ್ಷ ರೂ. ಇಡಲಾಗಿದೆ. ನಗರದ ವಿವಿಧೆಡೆ ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ದುರಸ್ತಿಗೆ 20 ಲಕ್ಷ ರೂ., ಮಳೆ ನೀರು ಚರಂಡಿ ನಿರ್ಮಾಣ ಮತ್ತು ದುರಸ್ತಿಗೆ 80 ಲಕ್ಷ ರೂ. ಮೀಸಲಿಡಲಾಗಿದೆ.

ಈ ಬಾರಿ ಪೌರ ಕಾಮಿರ್ಕರ ಪ್ರವಾಸಕ್ಕಾಗಿ 6.03 ಲಕ್ಷ ರೂ. ಮೀಸಲಿಟ್ಟಿರುವುದು ವಿಶೇಷವಾಗಿದೆ. ಕುಡಿಯುವ ನೀರು ನಿರ್ವಹಣೆಗಾಗಿ 3.95 ಕೋಟಿ ರೂ. ಮೀಡಲಿಸಲಾಗಿದೆ. ಪ್ರಮುಖ ವೃತ್ತಗಳ ಅಭಿವೃದ್ಧಿಗಾಗಿ 50 ಲಕ್ಷ ರೂ., ಸಿಸಿ ಕ್ಯಾಮರಾ ಅಳವಡಿಕೆಗಾಗಿ 30 ಲಕ್ಷ ರೂ., ಸಿಎ ಸೈಟುಗಳನ್ನು ಗುರುತಿಸಿ ಅವುಗಳಿಗೆ ತಂತಿ ಬೇಲಿ ಹಾಕಲು 20 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಅಧ್ಯೆ ಚಂಪಕ್ಕ ಬಿಸಲಹಳ್ಳಿ ವಿವರಿಸಿದರು.

ಬಜೆಟ್​ಗೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಸೂಚನೆ ಮಾಡಿದರೆ, ಶಶಿಧರ ಬಸೇನಾಯ್ಕ ಅನುಮೋದನೆ ನೀಡಿದರು.