ರಾಣೆಬೆನ್ನೂರ: ಕಲಿಕೆಯಲ್ಲಿ ನಿಧಾನ ಮತ್ತು ಹಿಂದುಳಿದ ಮಕ್ಕಳು ಹರಸಾಹಸ ಮಾಡುತ್ತಿದ್ದರೆ, ಅಂತ ಮಕ್ಕಳನ್ನು ಒಟ್ಟಿಗೆ ಸೇರಿಸಿ ಕಲಿಕೆಗೆ ಪೂರಕ ವಾತಾವರಣ, ಕ್ರಿಯಾಶೀಲತೆ -ಚಟುವಟಿಕೆ ವಾತಾವರಣ ನಿರ್ಮಾಣ ಮಾಡಿದರೆ ಅಂತಹ ಮಕ್ಕಳು ಸಹ ಸಂರ್ಪೂಣ ಕಲಿಕೆಗೆ ಒಳಪಡುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹೇಳಿದರು.
ನಗರದ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಕ್ಲಸ್ಟರ್ 3 ವ್ಯಾಪ್ತಿಯ ಶಾಲೆಗಳ 1ರಿಂದ 5ನೇ ತರಗತಿ ಓದುವ ಎಫ್ಎಲ್ಎನ್ ಚಟುವಟಿಕೆಗಳ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗಾಗಿ ಆಯೋಜಿಸಿದ್ದ ಗಟ್ಟಿ ಓದು ಸ್ಪರ್ಧೆಯಲ್ಲಿ ಸಿಜಿಎಸ್ ಸ್ಕೂಲ್ನ ನವ್ಯಾ ನಾಗನೇಹಳ್ಳಿ ಪ್ರಥಮ, ಮೊಮರಿ ಪರೀೆಯಲ್ಲಿ ಚಂದನ ಕ್ಯಾಡಗಿ, ಕಥೆಕಟ್ಟುವುದು ಪೋಷಕರು ಮತ್ತು ಸಹ ಸಂಬಂಧ ಸ್ಪರ್ಧೆಯಲ್ಲಿ ಯೋಗೇಶ ಚಂಬಳೇಕರ, ಕಥೆ ಹೇಳುವ ಸ್ಪರ್ಧೆಯಲ್ಲಿ ಸಹನಾ ಕಾಂಬಳೆ, ಕೈ ಬರಹ ಸ್ಪರ್ಧೆಯಲ್ಲಿ ಸಿಂಧು ಶಿಂಧೆ, ಸಂತೋಷದಾಯಕ ಗಣಿತ ಸ್ಪರ್ಧೆಯಲ್ಲಿ ಅಶೋಕ ಮಂಡದ ಪ್ರಥಮ ಸ್ಥಾನ ಪಡೆದುಕೊಂಡರು. ಅವರಿಗೆ ನಗದು ಬಹುಮಾನ ನೀಡಲಾಯಿತು.
ಕ್ಷೇತ್ರ ಸಮನ್ವಯಾಧಿಕಾರಿ ಎಲ್. ಮಂಜನಾಯ್ಕ, ಮುಖ್ಯ ಶಿಕ್ಷಕ ಬಿ.ಪಿ. ಶಿಡೇನೂರ, ಎಸ್ಡಿಎಂಸಿ ಉಪಾಧ್ಯೆ ಶಿರಿನ್ ಭಾನು ದಾವಣಗೆರೆ, ಬಿಆರ್ಪಿ ಎನ್. ನಾಗರಾಜ, ಸಿಆರ್ಪಿ ಬಿ.ಎಸ್. ಮೂಕನಗೌಡ್ರ, ರಾಜು ಉಕ್ಕುಂದ, ಶಿಕ್ಷಕರಾದ ಎನ್.ಎಚ್. ಕರೆಗೌಡ್ರು, ಎಚ್.ಎಂ. ಸುತಾರ, ಬಿ.ಎಸ್. ಕರಿಮಲ್ಲಣ್ಣನವರ, ಬಿ.ಕೆ. ಬಿಷ್ಟಣ್ಣನವರ, ಜಿ.ಟಿ. ಬಾಲಣ್ಣನವರ, ಎಸ್.ಎಸ್. ಅಳಲಗೇರಿ, ಎಸ್.ಆರ್. ಉದಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.