ರಾಣೆಬೆನ್ನೂರ: ನಗರದ ಹೊರವಲಯದಲ್ಲಿರುವ ಮಾಕನೂರ ಕ್ರಾಸ್ ಬಳಿ ಬಸ್ ನಿಲ್ಲಿಸಲು ಹೇಳಿದ ವಿದ್ಯಾಥಿರ್ಗಳ ಮೇಲೆ ಹಾರಿಹಾಯ್ದು, ಅವಾಚ್ಯ ಪದಗಳಿಂದ ನಿಂದಿಸಿದ ಬಸ್ ಚಾಲಕ ಹಾಗೂ ನಿರ್ವಾಹಕರ ನಡೆ ವಿರೋಧಿಸಿ ಎಸ್ಎ್ಐ ನೇತೃತ್ವದಲ್ಲಿ ಗುರುವಾರ ವಿದ್ಯಾಥಿರ್ಗಳು ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಆರ್.ಟಿ.ಇ.ಎಸ್ ಕಾನೂನು, ಪದವಿ, ಬಿಇಎಡ್, ರೋಟರಿ ಪಿಯು, ಸರ್ಕಾರಿ ಪ್ರಥಮ ದರ್ಜೆ, ಇಂಜಿನಿಯರಿಂಗ್, ಬಸವ ಚೇತನ ಬಿಇಎಡ್ ಸೇರಿದಂತೆ ಅನೇಕ ಕಾಲೇಜಿನ ನೂರಾರು ವಿದ್ಯಾಥಿರ್ಗಳ ಸಂಚಾರಿಸುವ ಮಾಗೋಡ ಕ್ರಾಸ್ ಬಳಿ ಬಸ್ಗಳು ನಿಲ್ಲಿಸದೆ ಹೋಗುತ್ತಿದ್ದು ವಿದ್ಯಾಥಿರ್ಗಳಿಗೆ ತೊಂದರೆ ಉಂಟಾಗಿದೆ.
ಈ ಬಗ್ಗೆ ಕೇಳಿದರೆ ಚಾಲಕರು, ನಿರ್ವಾಕರು ವಿದ್ಯಾಥಿರ್ಗಳಿಗೆ ಮನಬಂದಂತೆ ಬೈಯುತ್ತಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಗಳು ಚಾಲಕ, ನಿರ್ವಾಹಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಕಡ್ಡಾಯವಾಗಿ ಮಾಗೋಡ ಕ್ರಾಸ್ನಲ್ಲಿ ಎಲ್ಲ ಬಸ್ ನಿಲುಗಡೆ ನೀಡಬೇಕು. ಇಲ್ಲವಾದರೆ ಬಸ್ ನಿಲ್ದಾಣ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಗಿರೀಶ ಬಣಕಾರ, ಕಿರಣ ಕುಮಾರ ಎಸ್., ಅನಿಲ ಕುಮಾರ ಮನವಳ್ಳಿ, ನಾಗರಡ್ಡಿ ಗೋಡಿಹಾಳ, ರಮೇಶ ಕೋಡಿಹಳ್ಳಿ, ಗುರುಪಾದಗೌಡ ಹಲಸೂರ, ವೀರೇಶ ಕರೆಯಣ್ಣನವರ, ಹನುಮಂತ ಹರಿಜನ, ಅಜೇಯ, ಮುತ್ತಯ್ಯ, ನಾಗರಾಜ ಮತ್ತಿತರರಿದ್ದರು.