ನ್ಯೂಸ್

ರಣಬೀರ್ ಕಪೂರ್ ನ್ಯೂಲುಕ್​ಗೆ ಅಭಿಮಾನಿಗಳು ಫಿದಾ: ಈ ಬಗ್ಗೆ ಕ್ರಿಕೆಟಿಗ ಹಾರ್ದಿಕ್ ಹೇಳಿದ್ದೇನು?

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್‌ಗಳ ಪಟ್ಟಿಯಲ್ಲಿ ರಣಬೀರ್ ಕಪೂರ್ ಕೂಡ ಒಬ್ಬರು. ರಣಬೀರ್​ ಕಪೂರ್​ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೊಸ ಲುಕ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಫೋಟೋ ಒಂದರಲ್ಲಿ ಕಾಣಿಸುವ ಟ್ಯಾಟೂ ಎಲ್ಲರ ಗಮನ ಸೆಳೆದಿದೆ.

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಣಬೀರ್ ಕಪೂರ್ ಅವರ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟ ಕಪ್ಪು ಬಣ್ಣದ ಬಟ್ಟೆ ತೊಟ್ಟು ಅದಕ್ಕೆ ಹೊಂದಿಕೊಳ್ಳುವಂತಹ ಬ್ಲಾಕ್​ ಸನ್​ಗ್ಲಾಸ್​ ಹಾಕಿ. ತಮ್ಮ ಹೊಸ ಹೇರ್​ ಸ್ಟೈಲ್​ನಲ್ಲಿ ಫೋಟೋಗೆ ಫೋಸ್​​ ಕೊಟ್ಟಿದ್ದಾರೆ.

ಶೇರ್​ ಮಾಡಿರುವ ಫೋಟೋ ಒಂದರಲ್ಲಿ ರಣಬೀರ್​ ಕಪೂರ್​ ತಮ್ಮ ಬಲ ಭುಜದ ಮೇಲೆ ಕುತ್ತಿಗೆಯ ಸಮೀಪ ಮಗಳ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ರಾಹಾ ಎಂದು ಟ್ಯಾಟೂ ಕಂಡು ಅಭಿಮಾನಿಗಳು ನಟನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್​ ಮಾಡುತ್ತಿದ್ದಾರೆ. ರಣಬೀರ್​ ಟ್ಯಾಟೂವನ್ನು ಬಹಿರಂಗಪಡಿಸಿರುವುದು ಇದೇ ಮೊದಲು.

ನಟನ ನ್ಯೂಲುಕ್​ಗೆ ನೆಟ್ಟಿಗರು ಕಿಲ್ಲರ್​​ ಎಂದು ಕರೆದಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೂಡ ರಣಬೀರ್ ಅವರ ಈ ನ್ಯೂಲುಕ್​ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೂರು ಫೈರ್ ಎಮೋಜಿಗಳ ಜತೆಗೆ ''ಸ್ಟೇಜ್ ಆನ್ ಫೈರ್'' ಎಂದು ಬರೆದಿದ್ದಾರೆ. ಸದ್ಯ ರಣಬೀರ್ ಕಪೂರ್ ನಿತೇಶ್ ತಿವಾರಿ ನಿರ್ದೇಶನದ ದೊಡ್ಡ ಬಜೆಟ್​ ಸಿನಿಮಾ 'ರಾಮಾಯಣ'ಕ್ಕೆ ತಯಾರಿ ನಡೆಸುತ್ತಿದ್ದಾರೆ. (ಏಜೆನ್ಸೀಸ್​​)