ನ್ಯೂಸ್

ಸಮಂತಾ ರುತ್​ ಪ್ರಭು ಅಲ್ಲ.. ರೂತ್​ಲೆಸ್​ ಪ್ರಭು; ರಾಣಾ ದಗ್ಗುಬಾಟಿ ಹೀಗೆಳಿದ್ದೇಕೆ.. | Rana Daggubati

ಹೈದರಾಬಾದ್​​​: ಇತ್ತೀಚೆಗೆ ಇಂಟರ್​ನ್ಯಾಷನಲ್​ ಇಂಡಿಯನ್​ ಫಿಲ್ಮ್​​ ಅಕಾಡೆಮಿ ಅವಾರ್ಡ್(IIFA) 2024 ದುಬೈನಲ್ಲಿ ನಡೆದಿದ್ದು ಎಲ್ಲರಿಗೂ ಗೊತ್ತೆ ಇದೆ. ಸದ್ಯ ಸಾಮಾಜಿಕ ಜಾಲತಾಣಲದ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ವಿಡಿಯೋದಲ್ಲಿ ಟಾಲಿವುಡ್​ ನಟ ರಾಣಾ ದಗ್ಗುಬಾಟಿ(Rana Daggubati) ಸೌತ್​ ಬ್ಯೂಟಿ ಸಮಂತಾ ರುತ್​​ ಪ್ರಭು ಅವರಿಗೆ ಕಾಲೆಳಿದಿದ್ದಾರೆ. ತಮಾಷೆಯ ಕ್ಷಣದಲ್ಲಿ ಇಬ್ಬರು ಆನಂದಿಸುತ್ತಿರುವುದನ್ನು ನೋಡಬಹುದು.

ನಟಿ ಸಮಂತಾ ಅವರು ವ್ಯುಮೆನ್​ ಆಫ್​​​ ದಿ ಇಯರ್​ ಪ್ರಶಸ್ತಿಯನ್ನು ಪಡೆದ ಬಳಿಕ ವೇದಿಕೆ ಮೇಲೆಯೇ ಇರುವಂತೆ ರಾಣಾ ದಗ್ಗುಬಾಟಿ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಸಿದ ಸಮಂತಾ ನಾನು ಇವಾಗ ಎಮೋಷನಲ್​ ಸ್ಪಿಚ್​​ ಕೊಟ್ಟಿದ್ದೇನೆ ಕಾಮಿಡಿ ಮಾಡಬೇಡ ಎಂದು ಹೇಳುತ್ತಾರೆ. ಅದಕ್ಕೆ ರಾಣಾ ಇಲ್ಲ...ಇಲ್ಲ ಎಮೋಷನಲ್​​ ಜತೆಗೆ ಮಾತನಾಡುವುದನ್ನು ಆರಂಭಿಸೋಣ ಎಂದುಕೊಂಡೆ ಎನ್ನುತ್ತಾರೆ.

ಬಳಿಕ ಸಮಂತಾ ಬಳಿ ಬಂದ ರಾಣಾ, ಸಮಂತಾ ಟಾಲಿವುಡ್​ನಿಂದ ಹಾಲಿವುಡ್​ವರೆಗೂ ಹೋಗಿದ್ದಾರೆ. ಒಂದು ಕಾಲದಲ್ಲಿ ಸಿಸ್ಟರ್​ ಇನ್​ ಲಾ ಆಗಿದ್ದ ಸಮಂತಾ ಈಗ ಸಿಸ್ಟರ್​​​ ಆಗಿದ್ದಾರೆ ಎಂದು ಹೇಳಿದರು.( ನಾಗಚೈತನ್ಯ ರಾಣಾ ದಗ್ಗುಬಾಟಿ ಅವರ ಸೋದರ ಸಂಬಂಧಿ.. ನಾಗಚೈತನ್ಯ ಮತ್ತು ಸಮಂತಾ ಅವರ ವಿವಾಹ ಹಾಗೂ ವಿಚ್ಛೇದನವನ್ನು ಅವರು ಇಲ್ಲಿ ಉಲ್ಲೇಖಿಸಿದ್ದಾರೆ) ರಾಣಾ ದಗ್ಗುಬಾಟಿ ಮಾತಿನ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಂತಾ ಸೆಲ್ಫ್​ ಟ್ರೋಲಿಂಗ್​ ಕೂಡ ಓಕೆ ನಾ.. ಎಂದು ಕೇಳಿದರು. ಬಳಿಕ ರಾಣಾ, ತೆಲುಗು ಸಿನಿಮಾ ಮಾಡುತ್ತಿಲ್ಲ ಏಕೆ ನೀನು ಎಂದು ಕೇಳಿದರು. ಅದಕ್ಕೆ ಸಮಂತಾ ನೀವು ತೆಲುಗು ಸಿನಿಮಾ ಮಾಡುತ್ತಿದ್ದೀರಾ ಎಂದ ಪ್ರಶ್ನಿಸಿದರು. ನಾವು ಸಿನಿಮಾ ಮಾಡುತ್ತಿದ್ದೇವೆ ಯಾರು ತೆಗೆದುಕೊಳ್ಳುತ್ತಿಲ್ಲ ಎಂದು ರಾಣಾ ತಮಾಷೆಯಾಗಿಯೆ ಉತ್ತರಿಸಿದರು.

ಬಳಿಕ ಮಾತನಾಡಿದ ಸಮಂತಾ ನನಗೂ ಹಾಗೆಯೇ.. ಸಿನಿಮಾ ಮಾಡಿದರೆ ಅದು ನರಸಿಂಹ ನಾಯ್ಡು ಅವರಂತೆ ಇರಬೇಕು, ರಾಣಾ ನಾಯ್ಡುವಿನಂತೆ ಅಲ್ಲ ಅಲ್ವಾ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ರಾಣಾ, ಅದು ಸಿನಿಮಾ ಅಲ್ಲ ಅಕ್ಕ..ಶೋ ಎಂದು ಹೇಳಿ ಮಾತು ಮುಂದುವರಿಸಿದರು. ಶೋನಲ್ಲಿ ಏನು ಬೇಕಾದರೂ ಮಾಡಬಹುದು ಎಂದು ಎಲ್ಲರೂ ಹೇಳುತ್ತಾರೆ. ಅದನ್ನು ನಿಮ್ಮ ಫ್ಯಾಮಿಲಿ ಮೆನ್​ ನೋಡಿಯೆ ಕಲಿತೆ ಎಂದು ಹೇಳಿದರು.

ಬಳಿಕ ಅಲ್ಲಿಯೇ ಇದ್ದ ನಟ ತೇಜ್​​​ ಟಾಲಿವುಡ್​ನಲ್ಲಿ ಇರುವವರೆಗೂ ಸಮಂತಾ ರುತ್​ ಪ್ರಭು ಆಗಿದ್ದರು ಈಗ ಬಾಲಿವುಡ್​ ಆಗಿರುವುದರಿಂದ ಸಮಂತಾ ರೂಡ್​ ಪ್ರಭು ಆಗಿದ್ದಾರೆ ಎಂದು ಹೇಳಿದರು. ಅದಕ್ಕೆ ಉತ್ತರಿಸಿದ ರಾಣಾ ನಾನು ಮೊದಲಿನಿಂದಲೂ ರೂತ್​ ಎಂದೇ ಕರೆಯುತ್ತೇನೆ ಎಂದರು. ಅದಕ್ಕೆ ಸಮಂತಾ ನಗುತ್ತಲೆ ರೂತ್​ಲೆಸ್​​​ ಎಂದು ಎನ್ನುತ್ತಾರೆ ಅವರ ಜತೆಗೆ ಧ್ವನಿ ಸೇರಿಸಿದ ರಾಣಾ ದಗ್ಗುಬಾಟಿ ರೂತ್​​ಲೆಸ್​ ಪ್ರಭು ಇವರು ಎನ್ನುತ್ತಾರೆ.

ನವೆಂಬರ್​ 7ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಸಿಟಾಡೆಲ್ ಹನಿ ಬನ್ನಿ ಸರಣಿಯಲ್ಲಿ ನಟಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ವರುಣ್ ಧವನ್ ಅವರ ಜತೆ ಮುಖ್ಯ ಪಾತ್ರದಲ್ಲಿ ಸಮಂತಾ ನಟಿಸಿದ್ದಾರೆ.(ಏಜೆನ್ಸೀಸ್​​)