ಬೆಂಗಳೂರು:
ರಾಮಯ್ಯ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿ, ಜೆಎಸ್ ಡಬ್ಲ್ಯೂ ಐಪಿ ಹೋಲ್ಡಿಂಗ್ಸ್ ಪೈ.ಲಿ ಹಾಗೂ ಶಾರಿಕ ಸ್ಮಾಟ್ ಟೆಕ್ ಪ್ರೈ.ಲಿ ಜೊತೆಗೂಡಿ ರಾಮಯ್ಯ ಕಾಲೇಜಿನ ಆವರಣದಲ್ಲಿ ಸೆಂಟರ್ ಆ್ ಎಕ್ಸಲೆನ್ಸ್ ನಿರ್ಮಾಣದ ಒಪ್ಪಂದಕ್ಕೆ ಸಹಿ ಹಾಕಿದೆ.
ಜೆಎಸ್ ಡಬ್ಲ್ಯೂ ಸಮೂಹ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಹಾಗೂ ಶಾರಿಕ ಸ್ಮರ್ಟ್ ಟೆಕ್ ಪ್ರೈ.ಲಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕ್ವೌಲ್ ಹಾಗೂ ಗೋಕುಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್. ಜಯರಾಂ ಒಪ್ಪಂದಕ್ಕೆ ಸಹಿ ಹಾಕಿದರು.
ಐದು ಕೋಟಿ ವೆಚ್ಚದಲ್ಲಿ ಸೆಂಟರ್ ಆ್ ಎಕ್ಸಲೆನ್ ನಿರ್ಮಾಣ ಮಾಡುತ್ತಿದ್ದು, ಇದರಿಂದ ಸಂಶೋಧನೆ, ತರಬೇತಿ ನೀಡಲು ಸಹಾಯ ಮಾಡಲಿದೆ. ಇದರಲ್ಲಿ ಬಹಳ ಮುಖ್ಯವಾಗಿ ಪ್ಲೆಕ್ಸಿಬಲ್ ಪವರ್ ಸಿಸ್ಟಂ, ಸ್ಮಾರ್ಟ್ ಗ್ರಿಡ್ ರೂಪಿಸುವ ಆಯೋಜನೆಯನ್ನು ಕಾಲೇಜು ಹೊಂದಿದೆ.
ಜೆಎಸ್ ಡಬ್ಲ್ಯೂ ಸಮೂಹ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್, ನಾನು ಈ ಕಾಲೇಜಿನಲ್ಲಿ 1980ರ ದಶಕದಲ್ಲಿ ಓದಿದೆ. ಈ ವೇಳೆಯಲ್ಲಿ ಈ ಕಾಲೇಜಿನ ಕ್ಯಾಂಪಸ್ ಇಷ್ಟು ದೊಡ್ಡ ಮಾದರಿಯ ಕ್ಯಾಂಪಸ್ ಹೊಂದಿರಲಿಲ್ಲ. ಇಂದು ಸಾಕಷ್ಟು ಬೆಳೆವಣಿಗೆಯನ್ನು ಹೊಂದಿದೆ. ನಾನು ಓದಿದ ಕಾಲೇಜಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ಈ ಸೆಂಟರ್ ಆ್ ಎಕ್ಸೆಲೆನ್ಸ್ ಆರಂಭಕ್ಕೆ ಅನುದಾನ ನೀಡುತ್ತಿದ್ದೇನೆ ಎಂದರು.
ಗೋಕುಲ ಶಿಕ್ಷಣಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್. ಜಯರಾಮ್ ಮಾತನಾಡಿ, ಸೆಂಟರ್ ಆ್ ಎಕ್ಸಲೆನ್ಸ್ ನಿರ್ಮಾಣದಿಂದ ಕಲಿಕೆ ಮತ್ತು ತರಬೇತಿಯಲ್ಲಿ ಸಾಕಷ್ಟು ಬದಲಾವಣೆ ಕಾಣಲಿದ್ದು, ಸೇವೆಗಾಗಿ ಪ್ರಯೋಗಾಲಯ ಎಂಬ ಪರಿಕಲ್ಪನೆಯಲ್ಲಿ ಮುಂದಿನ ಪೀಳಿಗೆಗೆ ವೃತ್ತಿಪರರು ನವೋದ್ಯಮಿಗಳನ್ನು ಸೃಷ್ಟಿಸುವ ಆಲೋಚನೆಯನ್ನು ಕಾಲೇಜು ಹೊಂದಿದೆ ಎಂದರು.
ಇದು ನಿರಂತರ ಕಲಿಕೆ ಕೌಶಲ್ಯ ಅಭಿವೃದ್ದಿ
ಮತ್ತು ಜ್ಞಾನದ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದರು.
ಕೃತಕ ಬುದ್ದಿಮತ್ತೆ(ಎ.ಐ) ಆಳವಾದ ಕಲಿಕೆ, ಬಿಗ್ ಡೇಟ, ಬ್ಲ್ಯಾಕ್ ಚೈನ್, ನೆಟ್ ವರ್ಕಿಂಗ್, ಆಟೋಮೆಷಿನ್ ಈ ಕ್ಷೇತ್ರಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ. ಎಂಜಿನಿಯರ್‌ಗಳಿಗೆ ಸ್ಮಾರ್ಟ್ ಗ್ರಿಡ್ ಪವರ್ ಸಿಸ್ಟಂ ನ ತರಬೇತಿ ನೀಡಲಿದ್ದು ಇದು ಕೌಶಲ್ಯ ಭರಿತ ಮಾನವ ಸಂಪನ್ಮೂಲವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗೋಕುಲ ಶಿಕ್ಷಣಸಂಸ್ಥೆ ಉಪಾಧ್ಯಕ್ಷ ಡಾ.ಎಂ.ಆರ್. ಸೀತಾರಾಂ, ಬಿ.ಎಸ್.ರಾಮಪ್ರಸಾದ್, ಮುಖ್ಯ ಕಾರ್ಯನಿರ್ವಾಹಕರು ಗೋಕುಲ ಶಿಕ್ಷಣಸಂಸ್ಥೆ ಮತ್ತು
ಪ್ರಾಂಶುಪಾಲರಾದ ಡಾ.ಎನ್.ವಿ.ಆರ್.ನಾಯ್ಡುರವರು ಇತರರು ಇದ್ದರು.
*ನಮ್ಮ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿ ನಮ್ಮ ಕಾಲೇಜಿಗೆ ಕೊಡುಗೆ ನೀಡುತ್ತಿರುವುದು ಖುಷಿಯ ವಿಚಾರ. ಇದೇ ರೀತಿ ಎಲ್ಲ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆ ನೀಡುವುದನ್ನು ರೂಢಿಸಿಕೊಳ್ಳಬೇಕು.
ಡಾ.ಎಂ.ಆರ್.ಜಯರಾಂ, ಅಧ್ಯಕ್ಷ, ಗೋಕುಲ ಶಿಕ್ಷಣ ಸಂಸ್ಥೆ