ನ್ಯೂಸ್

ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿ ರಮೇಶ್ ಪಾಳ್ಯ ಆಯ್ಕೆ

ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರಮೇಶ್ ಪಾಳ್ಯ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ರಮೇಶ್ ಪಾಳ್ಯ ಅವರು ತಮ್ಮ ಪ್ರತಿಸ್ಪರ್ಧಿ ವಿರುದ್ಧ ಒಂದು ಮತದ ಅಂತರದಿಂದ ಗೆಲುವು ಪಡೆದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಅಧ್ಯಕ್ಷ ಅವಧಿ ಐದು ವರ್ಷವಿದ್ದು, 2023-2028ನೇ ಸಾಲಿನ ವರೆಗೆ ಚುನಾಯಿತ ಸಮಿತಿ ಅಸ್ತಿತ್ವದಲ್ಲಿರುತ್ತದೆ. ಸಂಘದಲ್ಲಿ ಒಟ್ಟು 13 ನಿರ್ದೇಶಕರ ಸ್ಥಾನಗಳಿದ್ದು, ಈ ಪೈಕಿ 7 ಮಂದಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಉಳಿದವರು ಅವಿರೋಧವಾಗಿ ಆಯ್ಕೆಗೊಂಡಿದ್ದರು.

ನೂತನ ಪದಾಧಿಕಾರಿಗಳ ವಿವರ:

ಅಧ್ಯಕ್ಷ - ರಮೇಶ್ ಪಾಳ್ಯ, ಉಪಾಧ್ಯಕ್ಷ - ದೊಡ್ಡ ಬೊಮ್ಮಯ್ಯ ಹಾಗೂ ಖಜಾಂಚಿ - ಬಿ.ಎನ್.ಮೋಹನ್‌ಕುಮಾರ್.