ಆನಂದಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ರವಿಶಂಕರ್, ರಾಮಚಂದ್ರ, ಮಮತಾ ಇತರರಿದ್ದರು.  
ನ್ಯೂಸ್

ರಾಮಾಯಣ ಲೋಕಮಾನ್ಯ ಗ್ರಂಥ

ಶಿವಕುಮಾರ ಎಸ್.ಪಿ.

ಆನಂದಪುರ: ಕಾವ್ಯದ ಮೂಲಕ ಇಡೀ ಜಗತ್ತಿಗೆ ಮಾನವೀಯ ಗುಣಗಳನ್ನು ಸಾರಿದ ಮಹಾನ್ ವ್ಯಕ್ತಿ ವಾಲ್ಮೀಕಿ ಮಹರ್ಷಿ ಎಂದು ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ರವಿಶಂಕರ್ ತಿಳಿಸಿದರು.

ಕಾಲೇಜು ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿ, ರಾಮಾಯಣ ಮಹಾಕಾವ್ಯದಲ್ಲಿ ಅಣ್ಣ-ತಮ್ಮ, ತಂದೆ-ಮಗ, ಪತಿ-ಪತ್ನಿ, ದೇವರು-ಭಕ್ತರ ಉತ್ತಮ ಸಂಬಂಧ, ಗೆಳೆತನ, ವಚನ ಪರಿಪಾಲನೆ ಇತ್ಯಾದಿ ಮೌಲ್ಯಗಳನ್ನು ಸುಂದರವಾಗಿ ಬಿಂಬಿಸಿರುವ ವಾಲ್ಮೀಕಿ ಅತ್ಯದ್ಭುತ ಕವಿ ಎಂದರು.

ತಾವೇ ಸ್ವತಃ ಕಥೆಯ ಒಂದು ಪಾತ್ರವಾಗಿ ಘಟನೆಗಳನ್ನು ಮತ್ತು ವಿವಿಧ ಸ್ಥಳಗಳನ್ನು ಸ್ವತಃ ವೀಕ್ಷಿಸಿ ಬರೆದ ಇವರ ಕಾವ್ಯ ಇಂದಿಗೂ ಲೋಕಮಾನ್ಯ ಎಂದರು. ಉಪನ್ಯಾಸಕರಾದ ರಾಮಚಂದ್ರ, ಡಾ. ಗುರುಚರಣ, ಮಮತಾ, ಸರ್ವೇಶ, ಗಜಾನನ ಪಂಡಿತ್, ಶಶಿ, ಮಧುಚಂದ್ರ ಇತರರಿದ್ದರು.