ನ್ಯೂಸ್

ತಾಜ್ ಹೋಟೆಲ್ ನಲ್ಲಿ ಇದ್ದವರು ಈಗ ಜನರ ಮುಂದೆ ಕಣ್ಣಿರು ಸುರಿಸುತ್ತಿದ್ದಾರೆ - ಎಚ್ಡಿಕೆ ವಿರುದ್ಧ ಕಟೀಲ್ ಕಿಡಿ

ರಾಮನಗರ: ಅಧಿಕಾರದಲ್ಲಿದ್ದಾಗ ತಾಜ್ ವೆಸ್ಟ್ ಎಂಡ್ ಗೆ ಬಿಟ್ಟು ಹೋಗದ  ಕುಮಾರಸ್ವಾಮಿ ಈಗ ‌ಕಣ್ಣೀರು ಸುರಿಸಿ ರಾಜ್ಯದ ಜನರ ಮುಂದೆ  ಹೋಗುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದರು.
ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದ ಅಪ್ರಮೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ಅಧಿಕಾರ ಸಿಕ್ಕಾಗ ಯಾವ ಕೆಲಸ ಮಾಡದ ಅವರು, ಈಗ ಯಾವ ಮುಖ ಇಟ್ಟುಕೊಂಡು ಜನರ ಬಳಿ ಹೋಗುತ್ತಾರೆ ಎಂದು ಕುಟುಕಿದರು. . ಸಿಎಂ ಆಗಿದ್ದ ವೇಳೆ ಒಂದೇ ಒಂದು ದಿನ ಕೂಡ ಸಿಎಂ ಗೃಹ ಕಚೇರಿ ಕೃಷ್ಣಾಗೆ ಹೋಗಿಲ್ಲ. ಕೇವಲ‌ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಕುಳಿತ ಅಧಿಕಾರ ನಡೆಸಿದ್ದರು ಎಂದು ಟೀಕಿಸಿದರು. ನಮ್ಮದು ಡಬಲ್ ಇಂಜಿನ್ ಸರ್ಕಾರ, ಅಭಿವೃದ್ಧಿ ಮಂತ್ರದ ಮೂಲಕ ಜನರ ಮುಂದೆ ಹೋಗಿ ಮತ ಕೇಳುತ್ತೇವೆ ಎಂದರು.
ಚುನಾವಣೆ ಬಂತು ಅಂದರೆ ಬಿಜೆಪಿ ಶಾಸಕರ ಮನೆಯಲ್ಲಿ ಕೋಟಿ ಕೋಟಿ ಹಣ ಇರುತ್ತೆ ಎಂಬ ಎಚ್ ಡಿಕೆ ಹೇಳಿಕೆಗೆ ಉತ್ತರ ನೀಡಿದ ಕಟೀಲ್, ಅವರು ದುಡ್ಡು ಮಾಡಿರೋ ಕಾರಣಕ್ಕೋಸ್ಕರ ಇಷ್ಟು ದಿನ ಅವರು ರಾಜಕಾರಣ ಮಾಡುತ್ತಿದ್ದಾರೆ. ಅವರ ಬಳಿ ಎಷ್ಟು ದುಡ್ಡು ಇದೆ ಅನ್ನೋದನ್ನ ಬಹಿರಂಗಪಡಿಸಲಿ ಎಂದು ಸವಾಲು ಎಸೆದರು.
ಬಿಜೆಪಿ ಕರೆಪ್ಷೆನ್ ಕ್ಯಾಪಿಟಲ್ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಸೋನಿಯಾ ಗಾಂಧಿ, ರಾಬಟ್ ವಾದ್ರಾ ಅವರಿಗೆ ಇನ್ನೂ ಬೇಲ್ ಸಿಕ್ಕಿಲ್ಲ. ಈ ಹೇಳಿಕೆ‌ ನೀಡಿರುವ ಕಾಂಗ್ರೆಸ್ ನಾಯಕ ಸಹ ತಿಹಾರ್ ಜೈಲಿನಲ್ಲಿ ಇದ್ದು ಬಂದಿರುವವರು ಎಂದು ಲೇವಡಿ ಮಾಡಿದರು.