ರಾಮನಗರ : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಪಕ್ಷವು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ತಿಳಿಸಿದರು.
ರಾಮನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
2023 ರ ಚುನಾವಣೆ ದಲಿತ ಜನಾಂಗಗಳಿಗೆ ಶೋಷಿತ ಸಮುದಾಯಗಳಿಗೆ ಬಹಳ ನಿರ್ಣಾಯಕವಾದ ಚುನಾವಣೆ. ರಾಷ್ಟ್ರದಲ್ಲಿ ಎನ್ಡಿಎ ಜೊತೆ ಈಗಾಗಲೇ ಪಕ್ಷ ಮೈತ್ರಿಯಲ್ಲಿದೆ. ರಾಜ್ಯದಲ್ಲೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಪಕ್ಷದ ಬೆಳವಣಿಗೆಗೆ ಪೂರಕ ದಲಿತ ಮತಗಳು ಚದುರಿ ಹೋಗುವುದನ್ನು ತಡೆಯುವ ದೃಷ್ಟಿಯಿಂದ ಬಿಜೆಪಿ ಜೊತೆ ಬೇಷರತ್ ಹೊಂದಾಣಿಕೆ ಮಾಡಿಕೊಂಡಿದೆ.
ರಾಮನಗರದಲ್ಲಿ ಮೊಟ್ಟಮೊದಲ ಭಾರಿಗೆ ಬೆಂಬಲ ಘೋಷಣೆ ಮಾಡಿದ್ದೇವೆ. ಹೈದ್ರಾಬಾದ್ ಕರ್ನಾಟಕ ಭಾಗ, ಮೈಸೂರು ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪ್ರತಿ ಜಿಲ್ಲೆಯಲ್ಲಿ ಪಕ್ಷದ ಹೊಂದಾಣಿಕೆಯನ್ನು ತಿಳಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಪಕ್ಷಕ್ಕೆ ಪೂರಕವಾಗುವ ಅಭ್ಯರ್ಥಿಗಳು ಬಿಜೆಪಿ ಹಾಲಿ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಪೂರಕವಾಗಿರುವ ರಾಜ್ಯದ ಆನೇಕಲ್, ದೇವನಹಳ್ಳಿ, ಬೆಂಗಳೂರು ಗಾಂಧಿನಗರ, ಪುಲಕೇಶಿನಗರ, ಮುಳಬಾಗಿಲು, ಹನೂರು, ಗುಂಡ್ಲುಪೇಟೆ ಮೈಸೂರು ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನು ಪಕ್ಷಕ್ಕೆ ಬಿಟ್ಟುಕೊಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ ಶೀಘ್ರದಲ್ಲೇ ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚಿಸಲಾಗುತ್ತದೆ.
ಕ್ಷೇತ್ರ ಬಿಟ್ಟುಕೊಡುವುದು ಅವರಿಗೆ ಬಿಟ್ಟ ವಿಚಾರ ನಮ್ಮ ಪಕ್ಷವಂತೂ ಈ ಭಾರಿ ಬಿಜೆಪಿ ಬೆಂಬಲಿಸಲಿದೆ. ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಅಧಿಕಾರಕ್ಕೆ ಬರುವುದನ್ನು ತಡೆಯಲು ದಲಿತಪರ ಕಾಳಜಿ ಹೊಂದಿರುವ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಬೇಕೆನ್ನುವ ಕಾರಣದಿಂದ ಜೊತೆಗೆ ಎಸ್ಸಿ ಎಸ್ಟಿಗೆ ಮೀಸಲಾತಿ ಹೆಚ್ಚಳ ಮಾಡಿದ ಐತಿಹಾಸಿಕ ನಿರ್ಧಾರದಿಂದ ಪಕ್ಷ ಈ ತೀಮಾರ್ನ ಕೈಗೊಂಡಿದೆ. ಅತಂತ್ರ ವಿಧಾನಸಭೆ ನಿಮಾರ್ಣ ಆಗಬಾರದು ಬಹುಮತದೊಂದಿಗೆ ಬಿಜೆಪಿ ಆಡಳಿತ ನಡೆಸಬೇಕು ಎಂಬುದಾಗಿದೆ ಎಂದರು.
ಮಹಿಳಾ ಘಟಕ ಮುಖಂಡೆ ರಾಜಶ್ರೀ, ರಾಮನಗರ ಜಿಲ್ಲಾಧ್ಯಕ್ಷ ಡಾ. ಜಿ. ಗೋವಿಂದಯ್ಯ, ದಲಿತಸೇನಾ ರಾಜ್ಯಾಧ್ಯಕ್ಷ ಬನಶಂಕರಿ ನಾಗು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಡುವನಹಳ್ಳಿ ಚಂದ್ರು, ಮುಖಂಡರುಗಳಾದ ಸುರೇಶ್,, ಮಂಜು, ಅಬ್ಬನಕುಪ್ಪೆ ಕುಮಾರ್, ದಿನೇಶ್, ರವಿಕುಮಾರ್, ಲೋಕೇಶ್, ಕೀರ್ತಿ ಮುಂತಾದವರು ಭಾಗವಹಿಸಿದ್ದರು.