ನ್ಯೂಸ್

ಮೇಲ್ಸೇತುವೆ, ತಂಗುದಾಣ ನಿರ್ಮಿಸಿ ಹನುಮಂತನಗರ ಸುತ್ತಮುತ್ತಲ ಗ್ರಾಮಸ್ಥರ ಪಟ್ಟು

ಗಂಗಾಧರ ಬಿ ವಿ

ವಿಜಯವಾಣಿ ಸುದ್ದಿಜಾಲ ಬಿಡದಿ

ಹನುಮಂತನಗರದ ಬಳಿ ಇರುವ ಕೋತಿ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ಹಾದು ಹೋಗಿರುವ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ ನಿರ್ವಾಣ ಹಾಗೂ ತಂಗುದಾಣ ನಿರ್ಮಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.

ದೇವಾಲಯದ ಬಳಿಯ ಸರ್ವೀಸ್ ರಸ್ತೆಯಲ್ಲಿ ವಾಹನಗಳನ್ನು ತಡೆದ ಪ್ರತಿಭಟನಾಕಾರರು, ಗ್ರಾಮದ ಬಳಿ ಹೆದ್ದಾರಿ ದಾಟಲು ಸೂಕ್ತ ಜಾಗ ಬಿಟ್ಟಿಲ್ಲ. ಅರ್ಧ ಕಿಲೋಮೀಟರ್ ಬಳಸಬೇಕಿದೆ. ಅಲ್ಲದೆ ರಸ್ತೆ ದಾಟಲು ಕಿರಿದಾದ ಬ್ರಿಡ್ಜ್ ನಿರ್ವಾಣ ವಾಡಿದ್ದಾರೆ. ಹಾಗಾಗಿ ಹೆದ್ದಾರಿ ನಿರ್ವಾಣದ ಗುತ್ತಿಗೆ ಪಡೆದಿರುವ ದಿಲೀಪ್ ಬಿಲ್ಡ್‌ಕಾನ್ ಕಂಪನಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೇಲ್ಸೇತುವೆ ನಿರ್ವಾಣ ವಾಡಿ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಬೆಂಗಳೂರು - ಮೈಸೂರು ಹೆದ್ದಾರಿಯ ಬೈಪಾಸ್ ಹಾದುಹೋಗುವ ಹನುಮಂತನಗರದಲ್ಲಿ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕ್ರಮಗಳಿಂದ ಈ ಭಾಗದಲ್ಲಿ ಅಪಘಾತಗಳು ಹೆಚ್ಚುತ್ತಿವೆ. ರಸ್ತೆ ದಾಟಲು ಅವಕಾಶವಿಲ್ಲದ ಕಾರಣ ತಕ್ಷಣವೇ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸುತ್ತಮುತ್ತಲ ಗ್ರಾಮಸ್ಥರೊಂದಿಗೆ ಸೇರಿ ಹೆದ್ದಾರಿ ಸಂಚಾರ ಮಾಡುವುದಾಗಿ ಎಚ್ಚರಿಸಿದರು.

ಪುರಾತನ ದೇವಾಲಯವಿದೆ

ಹನುಮಂತನಗರದಲ್ಲಿ ಪುರಾತನ ಕೋತಿ ಆಂಜನೇಯಸ್ವಾಮಿ ದೇಗುಲವಿದೆ ಹಾಗೂ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯವಿದೆ. ಎರಡೂ ಕಡೆ ಜನವಸತಿ ಪ್ರದೇಶ ಹೊಂದಿರುವ ಹನುಮಂತನಗರದ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಇಂತಹ ಸ್ಥಳದಲ್ಲಿ ಜನರು ಒಂದು ಕಡೆಯಿಂದ ಮತ್ತೊಂದು ಬದಿಗೆ ಕಿ.ಮೀಗಟ್ಟಲೇ ಸುತ್ತಿಬಳಸಿ ರಸ್ತೆ ದಾಟಬೇಕಿದೆ. ದೇವಾಲಯಕ್ಕೆ ಮತ್ತು ಗ್ರಾಪಂ  ಕಾರ್ಯಾಲಯಕ್ಕೆ ಬರುವವರು ಹಾಗೂ ಶಾಲಾ ಮಕ್ಕಳು ರಸ್ತೆ ದಾಟಲು ಕಷ್ಟಪಡುವಂತಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ಬಸ್ ತಂಗುದಾಣ ಇಲ್ಲ

ಹನುಮಂತನಗರದ ಬಳಿ ಎರಡೂ ಕಡೆ ಬಸ್ ತಂಗುದಾಣ ನಿರ್ಮಿಸದಿರುವುದರಿಂದ ಪ್ರಯಾಣಿಕರು ಮಳೆ, ಬಿಸಿಲೆನ್ನದೆ ರಸ್ತೆ ಬದಿಯಲ್ಲಿ ನಿಲ್ಲಬೇಕಾಗಿದೆ. ಹೆದ್ದಾರಿ ನಿರ್ಮಾಣದ ವೇಳೆ ರಸ್ತೆಯ ಎರಡು ಬದಿ ಇದ್ದ ತಂಗುದಾಣಗಳನ್ನು ಒಡೆದುಹಾಕಲಾಗಿತ್ತು. ಹಾಗೂ ಮತ್ತೆ ಹೊಸದಾಗಿ ನಿರ್ಮಿಸುವ ಭರವಸೆ ನೀಡಲಾಗಿತ್ತು. ಆದರೆ ಹೆದ್ದಾರಿ ಕಾಮಗಾರಿ ಮುಗಿದಿದ್ದರೂ ತಂಗುದಾಣ ನಿರ್ವಾಣ ವಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಡದಿ ಆರೆಸ್ಸೆಸ್ಸೆನ್ ನಿರ್ದೇಶಕ ರವಿಕುವಾರ್, ಮುಖಂಡರಾದ ನಾರಾಯಣಸ್ವಾಮಿ, ಮಂಜುನಾಥ್, ಮಂಜುಳಮ್ಮ, ಶ್ವೇತಾ, ಸುನಂದಾ, ಭೈರಮ್ಮ, ಭಾಗ್ಯಮ್ಮ, ರತ್ನಮ್ಮ, ಲಕ್ಷ್ಮಮ್ಮ, ಹನುಮಕ್ಕ, ಯಶೋಧ, ಸಾಗರ್, ಹರಿ, ಚಂದ್ರು, ನಾಗರಾಜು, ಅಪ್ಪಿ, ಶ್ರೀರಾಮ್, ಮಹದೇವು ಮುಂತಾದವರು ಭಾಗವಹಿಸಿದ್ದರು.

ಹನುಮಂತನಗರದಲ್ಲಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಎಲ್ಲರ ಬಳಿ ದ್ವಿಚಕ್ರ ವಾಹನಗಳಿಲ್ಲ. ಶಾಲಾ ಮಕ್ಕಳು, ವಯೋವೃದ್ಧರು ಮಹಿಳೆಯರು ಬಸ್‌ಗಾಗಿ, ದೇವಾಲಯಕ್ಕೆ ಹಾಗೂ ಗ್ರಾಮ ಪಂಚಾಯಿತಿಗೆ ಬರಲು ಕಿಲೋ ಮೀಟರ್‌ಗಟ್ಟಲೇ ಸುತ್ತಿಬಳಸಿ ನಡೆದು ಬರಬೇಕಾಗಿದೆ. ಆದ್ದರಿಂದ ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು.

 ಜೆ. ಮಮತಾ ರವಿಕುವಾರ್, ಮಂಚನಾಯಕನಹಳ್ಳಿ ಗ್ರಾಪಂ ಸದಸ್