ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೊಳಿಸಿದ ಬೆನ್ನಲ್ಲೇ ಸಾರಿಗೆ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದು ಇದೀಗ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿ ಪರಿವರ್ತಿಸಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ(Ramalinga Reddy) ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ನೀವು ಮನೆಗೆ ಮಾರಿ, ಪರರಿಗೆ ಉಪಕಾರಿ: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ
"ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಬಸ್ನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ, ಹಾಗಾಗಿ ಬಸ್ಗಳಲ್ಲಿ ರಶ್ ಆಗಿ ಸ್ವಲ್ಪ ಸಮಸ್ಯೆಯಾಗಿದೆ. ಇದೆಲ್ಲಾ ತಿಂಗಳೊಳಗೆ ಸರಿಯಾಗಲಿದೆ" ಎಂದು ಹೇಳಿದ್ದಾರೆ.
"ಒಮ್ಮೆ ದೇವಸ್ಥಾನಕ್ಕೆ ಹೋದವರು ಪದೇ ಪದೇ ಹೋಗುವುದಿಲ್ಲ. ಈ ವಾರಂತ್ಯದಲ್ಲಿ ಕೆಲ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಬಿಡಲಾಗುವುದು. ನಮಗೆ ಎಷ್ಟೇ ಕಷ್ಟ ಎದುರಾದರೂ ಸದ್ಯದ ನಿಯಮವನ್ನು ಬದಲಾಯಿಸುವ ಮಾತಿಲ್ಲ" ಎಂದು ಹೇಳಿದ್ದಾರೆ.
"ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ(Students) ಬಸ್ ಸ್ಟಾಪ್ಗಳಲ್ಲಿ ಕಡ್ಡಾಯವಾಗಿ ನಿಲುಗಡೆ ಕೊಡಬೇಕು. ಈ ಕುರಿತು ಈಗಾಗಲೇ ನಾವು ಅಧಿಕಾರಿಗಳ ಮುಖಾಂತರ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದೇವೆ. ಪುಣ್ಯ ಕ್ಷೇತ್ರಗಳ ಮಾರ್ಗದಲ್ಲಿ ಹೋಗುತ್ತಿರುವ ಬಸ್ಗಳು ಹೆಚ್ಚು ರಶ್ ಆಗುತ್ತಿವೆ. ಸದ್ಯದಲ್ಲೇ ಕ್ರಮೇಣವಾಗಿ ಅಲ್ಲಿನ ಸಮಸ್ಯೆ ಬಗೆಹರಿಯಲಿದೆ" ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.